ನಾಪೋಕ್ಲು: ನೆಲಜಿ ಚೆಂಡುಮಾನಿ ಕೇರಿ ಮರಣ ಫಂಡ್ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ನೆಲಜಿ ದವಸ ಭಂಡಾರ ಕಟ್ಟಡದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಅಪ್ಪುಮನಿಯಂಡ ರಘು ಸುಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 210 ಸದಸ್ಯರಿದ್ದು, ಎಲ್ಲರ ಸಹಕಾರದಿಂದ ಉತ್ತಮ ಕೆಲಸ, ಕಾರ್ಯ ನಡೆಯುತ್ತಿದೆ. ಸಂಘದ ಸದಸ್ಯರು ಮರಣ ಹೊಂದಿದ ಸಂದರ್ಭ ಅವರ ಮೆನೆಗೆ 20 ಸಾವಿರ ರೂ. ತಲುಪಿಸುವ ವ್ಯವಸ್ಥೆಯಾಗುತ್ತಿದೆ. ಇದು ನೊಂದ ಕುಟುಂಬದ ಸಂಕಷ್ಟಕ್ಕೆ ಅನುಕೂಲವಾಗುತ್ತಿದೆ ಎಂದರು.
ಸಂಘಕ್ಕೆ ಸ್ಥಳ ದಾನಿ ಬಾಳೆಯಡ ಉತ್ತಪ್ಪ ಹಾಗೂ ಗ್ರಾಮದ ರಸ್ತೆ ನಿರ್ಮಾಣಕ್ಕೆ ಸಹಕರಿಸಿದ ಕರ್ನಲ್ ಬಾಳೆಯಡ ರೋಷನ್ ಅಪ್ಪಣ್ಣ ಹಾಗೂ ಅವರ ಪತ್ನಿಯರನ್ನು ಸನ್ಮಾನಿಸಿ ಗೌರವಿಸಲಾಗಿತು.
ಸಂಘದ ಕಾರ್ಯದರ್ಶಿ ಬಾಳೆಯಡ ಕಾವೇರಪ್ಪ, ನಿರ್ದೇಶಕ ಬಾಳೆಯಡ ಕುನ್ಯಪ್ಪ, ಕೈಬುಳಿರ ಸುಗುಣ, ಅಪ್ಪುಮನಿಯಂಡ ಉತ್ತಯ್ಯ, ಕೈಬುಳೀರ ರಮೇಶ್, ಪಂಜೇರಿರ ನಾಣಯ್ಯ, ಕೈಬುಳೀರ ಯಶೋಧಾ, ಚೇಕ್ ಪೂವಂಡ ರೀನಾ, ಮೊನ್ನಂಡ ಕುಶಾಲಪ್ಪ ಇದ್ದರು.