ಶಿರೋಳ: ಶರಣರು ಮಹಾತ್ಮರು ಯಾವ ಜಾತಿಗೂ ಸೀಮಿತವಾದವರಲ್ಲ ಅವರು ತಮ್ಮನ್ನು ನಂಬಿ ಬಂದ ಭಕ್ತರನ್ನು ಉದ್ಧರಿಸಲು ಧರೆಗೆ ಬಂದವರು ಎಂದು ಕಿತ್ತಲಿಯ ಸಿದ್ಧರಾಮೇಶ್ವರ ಮಠದ ಮಂಜುನಾಥ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀ ಯಚ್ಚರಸ್ವಾಮಿಗವಿಮಠದಲ್ಲಿ 188ನೇ ಆರಾಧನಾ ಮಹೋತ್ಸವದ ಅಂಗವಾಗಿ 9 ದಿನ ನಡೆದ ಪುರಾಣ ಪ್ರವಚಣ ಮಂಗಲೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀಯಚ್ಚರಸ್ವಾಮಿ ಗವಿಮಠವು ಲೋಕ ಕಲ್ಯಾಣಕ್ಕಾಗಿ ಪುರಾಣ ಪ್ರವಚಣ, ಜಾತ್ರೆಯಲ್ಲಿ ರೈತ, ಸೈನಿಕರಿಗೆ ಪಾದಪೂಜೆ, ಮಹಿಳಾ ಗೋಷ್ಠಿ, ಸಾಧಕರಿಗೆ ಸನ್ಮಾನ ಇತ್ಯಾದಿ ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಭಿನವ ಯಚ್ಚರಸ್ವಾಮೀಜಿ ಮಾತನಾಡಿ, ಶ್ರೀ ಯಚ್ಚರಮಹಾಸ್ವಾಮೀಜಿಗಳು ನಿರ್ವಿಕಲ್ಪ ಸಮಾಧಿಯಲ್ಲಿ ಇದ್ದುಕೊಂಡು ಭಕ್ತರನ್ನು ಉದ್ಧರಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಅಭಿನವ ಯಚ್ಚರಸ್ವಾಮೀಜಿಯವರ ಪಾದಪೂಜೆ, ಪ್ರವಚಣಕಾರ ಪ್ರಲ್ಹಾದ ಮುಂಡಾಸದ, ಸಂಗೀತಸೇವೆ ಮಾಡಿದ ಸಕ್ಕರಗೌಡ ಶಾಸ್ತ್ರೀ, ಯಲ್ಲೇಶ ಕುಮಾರ ಹೂಗಾರ ಹಾಗೂ ದಾನಿಗಳನ್ನು, ಸೇವಾಕರ್ತರನ್ನು ಸನ್ಮಾನಿಸಲಾಯಿತು.
ಮುತ್ತಣ್ಣ ಕಡಗದ, ಪ್ರಕಾಶಗೌಡ ತಿರಕನಗೌಡ್ರ, ಪಾಂಡುರಂಗ ಬಡಿಗೇರ, ಪ್ರಕಾಶ ಸಂಗಳದ, ಕೆ.ಡಿ. ಬಡಿಗೇರ, ಮಂಜುನಾಥ ಬಡಿಗೇರ, ಬಾಪುಗೌಡ್ರ ತಿಮ್ಮನಗೌಡ್ರ, ಶಿವರಾಜ ಮುಗಳಿ, ಶರಣಪ್ಪ ಹತ್ತಿಕಟಿಗಿ, ದೇವರಾಜ ಜಂಗವಾಡ, ರಮೇಶ ಚಾಗಣ್ಣವರ ಇತರರು ಇದ್ದರು.