ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರುಗಿತು. ಡಾ. ಬಿ.ಎಸ್. ನಾವಿ, ವೀಣಾ ವಿಜಾಪುರೆ, ಪ್ರಕಾಶ, ಪ್ರೊ. ವಂದಾಲ, ಡಾ. ಮಲ್ಲಿಕಾರ್ಜುನ ಕೆರುಟಗಿ, ಪ್ರೊ.ಬಿ.ಎಂ.ವಾಸನ, ಈಶ್ವರ ಮಮದಾಪುರ, ಶಿವಾನಂದ ನಾವಿ, ಮಾರುತಿ ಹಡಪದ, ಶಿವಪುತ್ರಪ್ಪ ನಾವಲಗಿ, ಕುಮಾರ ನಾವಿ, ಕೆ. ತಿಪ್ಪೇಸ್ವಾಮಿ, ಮನೋಹರ ಕೋರೆ ಇತರರಿದ್ದರು. 
ಜಿಲ್ಲೆ

ಉತ್ತಮ ವಿಚಾರದಿಂದ ಗಟ್ಟಿ ವ್ಯಕ್ತಿತ್ವ

ಶಂಕರ ಗೆಜ್ಜಿ

ಬೆಳಗಾವಿ: ಉತ್ತಮ ವಿಚಾರಗಳು ಮಾತ್ರ ಮನುಷ್ಯನನ್ನು ಎತ್ತರಕ್ಕೆ ಒಯ್ಯುತ್ತವೆ. ಅದಕ್ಕಾಗಿ ಉತ್ತಮ ವಿಚಾರ ಹಾಗೂ ಸನ್ನಡತೆಯೊಂದಿಗೆ ಸಮಾಜದ ಪ್ರಮುಖ ವಾಹಿನಿಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಸ್.ನಾವಿ ಅಭಿಪ್ರಾಯಪಟ್ಟರು.

ರಾಜ್ಯ ಹಡಪದ ನೌಕರರ ಸಂಘ, ಬೆಳಗಾವಿ ಜಿಲ್ಲಾ ಘಟಕ ವತಿಯಿಂದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಬಸವಾದಿ ಶರಣರು ಮೇಲು-ಕೀಳುಗಳ ಅಸಮಾನತೆ ತೊಡೆದು ಹಾಕಲು ಪ್ರಯತ್ನಿಸಿ ವಚನಗಳ ಮೂಲಕ ಅತ್ಯುತ್ತಮ ಜೀವನ ಸಂದೇಶ ನೀಡಿದ್ದಾರೆ ಎಂದರು.
ಪಾಲಿಕೆ ಸದಸ್ಯೆ ವೀಣಾ ವಿಜಾಪುರೆ ಉದ್ಘಾಟಿಸಿ, ಮಹಿಳೆಯರು ಸುಶಿಕ್ಷಿತರಾಗಿ ನಾಯಕತ್ವ ವಹಿಸಿಕೊಳ್ಳಬೇಕು. ಶೈಕ್ಷಣಿಕ ಸಾಧನೆ ಮೂಲಕ ಉತ್ತಮ ಜೀವನ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಶಿಯಾ ತಂಡದ ಅಧ್ಯಕ್ಷ ಪ್ರಕಾಶ, ಶಿಯಾ ತಂಡವು ಹಡಪದ ನೌಕರರ ಹಿತಕ್ಕಾಗಿ ಶ್ರಮಿಸುತ್ತಿದ್ದು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ನೀಡುತ್ತಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಪ್ರೊ.ವಂದಾಲ, ಡಾ.ಮಲ್ಲಿಕಾರ್ಜುನ ಕೆರುಟಗಿ, ಪ್ರೊ.ಬಿ.ಎಂ. ವಾಸನ, ಈಶ್ವರ ಮಮದಾಪುರ, ಶಿವಾನಂದ ನಾವಿ, ಮಾರುತಿ ಹಡಪದ, ಪ್ರೊ.ಶಿವಪುತ್ರಪ್ಪ ನಾವಲಗಿ, ಕುಮಾರ ನಾವಿ, ಕೆ. ತಿಪ್ಪೇಸ್ವಾಮಿ, ಮನೋಹರ ಕೋರೆ, ಸುನಂದಾ ಜಂಬಗಿ, ಸುರೇಶ ನಾವಲಗಿ, ವೀರಭದ್ರ ಯರನಾಳ ಇದ್ದರು. ಸ್ಫೂರ್ತಿ ನಾವಿ ನಿರೂಪಿಸಿದರು.