ಜಿಲ್ಲೆ

ಡಾ.ಮರೋಳ ಅವರಿಗೆ ಅತ್ಯುತ್ತಮ ವೈದ್ಯಕೀಯ ಶಿಕ್ಷಕ ಪ್ರಶಸ್ತಿ

Uttara Kannada - Subash Hegde

ಕಾರವಾರ: ಇಲ್ಲಿನ ಕ್ರಿಮ್ಸ್ ಮತ್ತು ಹಾವೇರಿ ವೈದ್ಯಕೀಯ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ್ ಮರೋಳ ಅವರಿಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ರಾಜ್ಯ ಶಾಖೆಯಿಂದ ಅತ್ಯುತ್ತಮ ವೈದ್ಯಕೀಯ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಸೆ.15 ರಂದು ರಾಯಚೂರಿನಲ್ಲಿ ಆಯೋಜನೆಯಾಗಿದ್ದ ಐಎಂಎ ರಾಜ್ಯ ವೈದ್ಯಕೀಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದ್ಯ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಶ್ರಮಿಸಿದ್ದಲ್ಲದೆ, ಅವರು ಉತ್ತಮ ಮೌಲ್ಯಗಳ್ನು ಅಳವಡಿಸಿಕೊಳ್ಳಲು, ಗುಣಮಟ್ಟವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿದ್ದಕ್ಕಾಗಿ ಮರೋಳ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಐಎಂಎ ರಾಜ್ಯ ಅಧ್ಯಕ್ಷ ಡಾ.ಶ್ರೀನಿವಾಸ ಎಸ್.ಕಾರ್ಯದರ್ಶಿ ಡಾ.ಕರುಣಾಕರ ಬಿ.ವಿ., ಕರ್ನಾಟಕ ವೈದ್ಯಕೀಯ ಪರಿಷತ್ ಅಧ್ಯಕ್ಷ ಡಾ.ಯೋಗಾನಂದ ರೆಡ್ಡಿ, ನವೋದಯ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ.ದಯಾನಂದ, ಡಾ.ಗೀತಾ ದೊಡ್ಮನಿ, ಡಾ.ವೀರಭದ್ರಪ್ಪ ಚಿನಿವಾಲರ್ ಇದ್ದರು.