ಜಿಲ್ಲೆ

ಸಾಧನೆಗೆ ಆರಂಭ ಉತ್ತಮವಾಗಿರಲಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಬದುಕಿಗಾಗಿ ನಾವು ಏನು ಸಾಧನೆ ಮಾಡಬೇಕು, ಸಾಧನೆ ದಾರಿ ಯಾವ ರೀತಿ ಇರಬೇಕು ಎಂಬುದಕ್ಕೆ ವಿದ್ಯಾರಂಭ ಕಾರ್ಯಕ್ರಮ ಸಾ. ಮಕ್ಕಳಿಗೆ ಈ ರೀತಿ ವಿದ್ಯಾರಂಭ ಮಾಡಿಸುವುದರಿಂದ ಮಕ್ಕಳ ಅಭಿವೃದ್ಧಿ ಉತ್ತಮವಾಗಲಿದೆ. ಮುಂದೆ ಗುರಿ ಹಿಂದೆ ಗುರು ಇರಬೇಕು ಎಂಬ ಮಾತನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು ಎಂದು ದೊಡವಾಡದ ಶ್ರೀ ಷಟಸ್ಥಲ ಬ್ರಹ್ಮ ಜಡೆ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಮುಮ್ಮಿಗಟ್ಟಿಯ ರಾಷ್ಟ್ರೋತ್ಥಾನ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ವಿದ್ಯಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ವಿಕಾಸದ ಪ್ರಾಂತ ಸಂಯೋಜಕ ಅಶ್ವಿನ್​ ಭೂಸಾರೆ ಮಾತನಾಡಿ, ನಮ್ಮ ಸಾಧನೆಗೆ ಆರಂಭ ಉತ್ತಮವಾಗಿರಬೇಕು. ನಮ್ಮ ಮಕ್ಕಳ ವಿದ್ಯಾರಂಭ ಗುರುಗಳ ಆಶೀರ್ವಾದದಿಂದ ಆರಂಭವಾಗಿದ್ದರಿಂದ ಅವರ ಅಭಿವೃದ್ಧಿ ಉತ್ತಮವಾಗಲಿದೆ. ಗುರುಗಳ ಬಗ್ಗೆ ಶ್ರದ್ಧೆ ಇದ್ದರೆ ನಮ್ಮ ಜೀವನ ಸುಗಮವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಲಯದ ಅಧ್ಯಕ್ಷ ಡಾ. ಎಸ್​.ಆರ್​ ರಾಮನಗೌಡರ ಮಾತನಾಡಿ, ಓಂ ಅಕ್ಷರ ಬರೆಯುವ ಮೂಲಕ ನಮ್ಮ ವಿದ್ಯಾರಂಭ ಆರಂಭಿಸಬೇಕು. ಗುರುಗಳ ಬೋಧನೆ ಮೂಲಕ ಮಾಡಬೇಕು. ಶಾಲೆಯು ಮಕ್ಕಳಿಗೆ ಒಳ್ಳೆ ಸಂಸ್ಕಾರ ಮತ್ತು ಜೀವನ ಮೌಲ್ಯಗಳನ್ನು ಕಲಿಸಿಕೊಡುವ ಶಾಲೆಯಾಗಿದೆ ಎಂದರು.
2023&24ನೇ ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಅಭಿನಂದಿಸಲಾಯಿತು.
ಆರ್​ಎಸ್​ಎಸ್​ ಪ್ರಾಂತ ಸಂಯೋಜಕ ಅಶೋಕ ಸೋನಕರ, ಸಹ ಮುಖ್ಯಾಧ್ಯಾಪಕಿ ಪದ್ಮಾವತಿ, ಎನ್​.ಎಂ. ಜಂತಲಿ, ಆನಂದ ದೇಶಪಾಂಡೆ, ಶಾಲೆ ಮುಖ್ಯಾಧ್ಯಾಪಕ ಮಹಾಂತೇಶ ಮಠಪತಿ, ಮಹದೇವಪ್ಪ ದಂಡಿನ, ಬಸವರಾಜ ಕೌಜಲಗಿ, ರೇಖಾ ಅಂಬೇಕರ, ದಯಾನಂದ ಏಣಗಿ, ಶಿಕ್ಷಕರು, ಸಿಬ್ಬಂದಿ, ವಿದ್ಯಾಥಿರ್ಗಳು, ಪಾಲಕರು, ಇತರರು ಇದ್ದರು.
ಸಂತೋಷ ತೋಟಗಿ ಸ್ವಾಗತಿಸಿದರು. ಕೇಂದ್ರದ ಕಾರ್ಯದಶಿರ್ ರಾವೇಂದ್ರ ಅಂಬೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೀಲಾ ಗೌಡರ ನಿರೂಪಿಸಿದರು. ರೇಖಾ ಯಲಿಗಾರ ವಂದಿಸಿದರು.