ಸಂಡೂರು: ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕನ್ನಡ ಮಾಧ್ಯಮದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 64 ವಿದ್ಯಾರ್ಥಿಗಳು ಹಾಜರಾಗಿದ್ದು, 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ತನುಶ್ರೀ ಶೇ. 94.24 ಮೊದಲ, ದೇವರಮನೆ ಅಮೃತ್ ಕುಮಾರ ಶೇ.92.80 ದ್ವಿತೀಯ, ಅಮೂಲ್ಯ ಶೇ.91.36 ತೃತೀಯ, ಪಿ.ನುಸರತ್‌ಬೀ ಶೇ.91.20 ನಾಲ್ಕನೇ, ಮಹ್ಮದ್ ಮೆಹಫೂಜ್ ಶೇ.89.60 ಅಂಕ ಪಡೆದು ಐದನೇ ಸ್ಥಾನ ಪಡೆದಿದ್ದಾರೆ.
ಡಿಸ್ಟಿಂಕ್ಷನ್-10, ಪ್ರಥಮ ಸ್ಥಾನ-31, ದ್ವಿತೀಯ ಸ್ಥಾನ-13 ಪಡೆದುಕೊಂಡಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ತಲಾ ಒಬ್ಬ ವಿದ್ಯಾರ್ಥಿಗಳು ಪೂರ್ಣಅಂಕ ಪಡೆದಿದ್ದು, ವಿದ್ಯಾರ್ಥಿಗಳು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಸಂಸ್ಥೆ ಕಾರ್ಯದರ್ಶಿಗಳಾದ ಚಿದಂಬರ್ ಎಸ್.ನಾನಾವಟೆ ತಿಳಿಸಿದ್ದಾರೆ.