ಸವಣೂರ: ಶಿಕ್ಷಕರ ನಿರಂತರ ಪರಿಶ್ರಮದಿಂದ ಮಾತ್ರ ಸರ್ಕಾರಿ ಶಾಲೆಯಲ್ಲಿ ಉತ್ತಮ ಫಲಿತಾಂಶ ಮೂಡಿಬರಲು ಸಾಧ್ಯ ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ಶಿರಬಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುಂಠಿತವಾಗುತ್ತಿದೆ ಎಂಬುದು ವಿಷಾದನೀಯ ಸಂಗತಿ. ಪಾಲಕರು ಇಂಗ್ಲಿಷ್ ವ್ಯಾಮೋಹ ಬಿಟ್ಟು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಸಲು ಮುಂದಾಗುವುದು ಅವಶ್ಯವಾಗಿದೆ. ನಾನು ದನ ಕಾಯುತ್ತ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕಲಿತು ಇಂದು ಉನ್ನತ ಹುದ್ದೆಯಲ್ಲಿ ಇದ್ದೇನೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ಬಹುಮುಖ ಪತ್ರಿಭೆಯನ್ನು ಹೊರ ಹಾಕಲು ಸರ್ಕಾರ ವಿವಿಧ ಯೋಜನೆ ರೂಪಿಸುತ್ತಿದೆ ಎಂದರು.
ಶಿರಬಡಗಿ ಗ್ರಾಮದಲ್ಲಿ ವಿವಿಧ ಸಮಾಜದ ಸಭಾ ಭವನ ನಿರ್ವಣಕ್ಕೆ ಈಗಾಗಲೇ 35 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದರು.
ಬಿಇಒ ಎಂ.ಎಫ್. ರ್ಬಾ ಮಾತನಾಡಿ, ಶಿಕ್ಷಣ ಕುರಿತು ಅತ್ಯಂತ ಕಾಳಜಿಯಿರುವ ಶಾಸಕರು ಶಿರಬಡಗಿ ಶಾಲೆಗೆ ಸುಮಾರು 16.40 ಲಕ್ಷ ರೂಪಾಯಿ ಅನುದಾನದಲ್ಲಿ ಶಾಲೆ ಕೊಠಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕೈಗೊಂಡಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷ ತೇಜಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಮಣ್ಣ ಬಸಾಪುರ, ಈರಣ್ಣ ಜಾವೂರ, ಗ್ರಾಪಂ ಸದಸ್ಯರಾದ ತುಕಾರಾಮ ನಾಯಕ್, ಶರಣಬಸಪ್ಪ ಪರಮ್ಮನವರ, ಸುಶೀಲವ್ವ ಲಮಾಣಿ, ಲಕ್ಷ್ಮಣ ಮಾದರ, ಎಸ್ಡಿಎಂಸಿ ಅಧ್ಯಕ್ಷ ಮೌಲಸಾಬ್ ನದಾಫ್, ಫಕೀರಪ್ಪ ಲಮಾಣಿ, ಶಿವಮೂರ್ತಿ ಲಮಾಣಿ, ಶಿವಲಿಂಗಯ್ಯ ಹಿರೇಮಠ, ಮಲ್ಲಿಕಾರ್ಜುನ ನೀರಲಗಿ, ಸಂತೋಷ ಲಮಾಣಿ, ಪಿ.ವಿ. ಗುತ್ತಲ ಇತರರಿದ್ದರು. ಶಿಕ್ಷಕ ಸುಬ್ರಮಣ್ಯ ಸಿ. ಕಾರ್ಯಕ್ರಮ ನಿರ್ವಹಿಸಿದರು.