ಜಿಲ್ಲೆ

ವುಮೆನ್ಸ್ ವೆಲ್‌ನೆಸ್ ಕ್ಲಿನಿಕ್ ಗೆ ಉತ್ತಮ ಪ್ರತಿಕ್ರಿಯೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮಹಿಳೆಯರ ಆರೊಗ್ಯ ಸುಧಾರಣೆಗಾಗಿ ಮತ್ತು ಆರೊಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ರ್ಚಚಿಸಲು ರಾಜ್ಯ ಸರ್ಕಾರ, ರಾಷ್ಟ್ರಿಯ ಆರೊಗ್ಯ ಅಭಿಯಾನದಡಿ ಆರಂಭಿಸಿವ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್ (ವುಮೆನ್ಸ್ ವೆಲ್‌ನೆಸ್ ಕ್ಲಿನಿಕ್)ಗಳಿಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸ್ವಾಸ್ಥ್ಯ ಕ್ಲಿನಿಕ್‌ನಲ್ಲಿ ಮಹಿಳೆಯರು ತಮ್ಮ ಆರೊಗ್ಯ ಸಮಸ್ಯೆ ಕುರಿತು ಮುಕ್ತವಾಗಿ ಚರ್ಚಿಸುತ್ತಿದ್ದಾರೆ. ಹದಿಹರೆಯದವರಿಗೆ ದೈಹಿಕ ಬದಲಾವಣೆ, ವೈಯಕ್ತಿಕ ಶುಚಿತ್ವ ಮತ್ತು ಸಂತೊನಾತ್ಪತ್ತಿ ಕುರಿತು ಅರಿವು ಮೂಡಿಸಲಾಗುತ್ತಿದೆ. 30 ವರ್ಷ ಮೆಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್‌ನಂತ ಸೇರಿ ಗಂಭೀರ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಾಗುತ್ತಿದ್ದು, ಮಹಿಳೆಯರು ಪರಿಣಾಮಕಾರಿಯಾಗಿ ಇದರ ಉಪಯೋಗ ಪಡೆಯುತ್ತಿದ್ದಾರೆ.