ಜಿಲ್ಲೆ

ಮಿನಿ ಮ್ಯಾರಥಾನ್​ಗೆ ಉತ್ತಮ ಸ್ಪಂದನೆ

ತುಮಕೂರು ಡೆಸ್ಕ್

ವಿಜಯವಾಣಿ ಸುದ್ದಿಜಾಲ ತುಮಕೂರು
ತುಮಕೂರು ದಸರಾ ಉತ್ಸವ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮಿನಿಮ್ಯಾರಥಾನ್​ನಲ್ಲಿ ತುಮಕೂರಿನ ಪೊಲೀಸ್​ ಇಲಾಖೆಯ ಗುರುಪ್ರಸಾದ್​ ಹಾಗೂ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್​) ಡಿ.ಆರ್​.ಸ್ಮಿತಾ ಪ್ರಥಮ ಸ್ಥಾನ ಗೆದ್ದುಕೊಂಡರು.


ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೇತೃತ್ವದಲ್ಲಿ ಆಯೋಜಿಸಿದ್ದ ಮಿನಿಮ್ಯಾರಥಾನ್​ಗೆ ಪುರುಷರ ವಿಭಾಗದ 10 ಕಿ.ಮೀ., ಓಟದ ಸ್ಪರ್ಧೆಯಲ್ಲಿ ಪೊಲೀಸ್​ ಇಲಾಖೆಯ ತುಮಕೂರಿನ ಗುರುಪ್ರಸಾದ್​ ಪ್ರಥಮ ಸ್ಥಾನದೊಂದಿಗೆ 10 ಸಾವಿರ ರೂ., ನಗದು ಬಹುಮಾನ ಗೆದ್ದುಕೊಂಡರು. ತುಮಕೂರಿನವರೇ ಆದ ಟಿ.ಎಸ್​.ಸಂದೀಪ್​ ದ್ವೀತಿಯ ಸ್ಥಾನದೊಂದಿಗೆ 8 ಸಾವಿರ ರೂ., ನಗದು, ಪ್ರಶಸ್ತಿ ಪಡೆದರು. ಬೆಂಗಳೂರಿನ ಕೆ.ಕೆ.ವೆಂಕಟೇಶ್​ ತೃತೀಯ ಸ್ಥಾನ ಪಡೆದು 6 ಸಾವಿರ ರೂ., ನಗದು ಬಹುಮಾನ, ಮೈಸೂರಿನ ಪಿ.ಮಣಿಕಂಠ ನಾಲ್ಕನೇ ಸ್ಥಾನಗಳಿಸಿ 4 ಸಾವಿರ ರೂ.,ನಗದು, ಬೆಂಗಳೂರಿನ ಸಿ.ಎಸ್​.ಲಕ್ಷಿ$್ಮಶ್​ ಐದನೇ ಸ್ಥಾನ (2 ಸಾವಿರ ರೂ., ನಗದು) ಹಾಗೂ ತುಮಕೂರಿನ ಅವಧೀಶ್​ ನಿಷಾದ್​ 6ನೇ ಸ್ಥಾನ ಗಳಿಸಿ 2 ಸಾವಿರ ನಗದು ಗೆದ್ದುಕೊಂಡರು.


ಸಾಯ್​ ಪ್ರಾಬಲ್ಯ: ಮಹಿಳಾ ವಿಭಾಗದಲ್ಲಿ ಭಾರತೀಯ ಕ್ರೀಡಾಪ್ರಾಧಿಕಾರದ ಕ್ರೀಡಾಪಟುಗಳು ಪ್ರಾಬಲ್ಯ ಮೆರೆದರು. ಬೆಂಗಳೂರಿನ ಸಾಯ್​ನ ಡಿ.ಆರ್​. ಸ್ಮಿತಾ 6 ಕಿ.ಮೀ., ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ 10 ಸಾವಿರ ರೂ., ನಗದು ಬಹುಮಾನ ಗೆದ್ದರು. ಎಂ.ರಾಶಿ ದ್ವೀತಿಯ ಸ್ಥಾನದೊಂದಿಗೆ 8 ಸಾವಿರ ನಗದು, ಪಾರಿತೋಷಕ ಪಡೆದರು. ಪ್ರಿಯಾಂಕಾ ತೃತೀಯ ಸ್ಥಾನಗಳಿಸಿ 6 ಸಾವಿರ ರೂ., ನಗದು ಗೆದ್ದರು. ಮೊದಲ ಮೂರು ಸ್ಥಾನ ಸಾಯ್​ ಕ್ರೀಡಾಪಟುಗಳು ಗೆದ್ದರು. ಮೈಸೂರಿನ ಎಸ್​.ಜಯಶ್ರೀ 4ನೇ ಸ್ಥಾನಗೆದ್ದು 4 ಸಾವಿರ ರೂ., ನಗದು ಬಹುಮಾನ ಪಡೆದರು. ತುಮಕೂರಿನ ಎಸ್​.ಎಂ.ಸಾನಿಕಾ 5ನೇ ಸ್ಥಾನಗಳಿಸಿ ಹಾಗೂ ಬೆಂಗಳೂರಿನ ಎಂ.ಸೌಮ್ಯ 6ನೇ ಸ್ಥಾನಗಳಿಸಿ ತಲಾ 2 ಸಾವಿರ ರೂ. ನಗದು ಗೆದ್ದುಕೊಂಡರು.
ಮೊದಲ ಬಾರಿ ಯಶಸ್ವಿ: ತುಮಕೂರು ದಸರಾ ಉತ್ಸವದ ಭಾಗವಾಗಿ ಆಯೋಜಿಸಿದ್ದ ಮಿನಿ ಮ್ಯಾರಥಾನ್​ಗೆ ಉತ್ತಮ ಜನಸ್ಪಂದನೆ ಸಿಕ್ಕಿತು.


ಮ್ಯಾರಥಾನ್​ಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ.ಜಿ.ಪರಮೇಶ್ವರ, ಯುವ ಸಮುದಾಯ ಕ್ರೀಡೋತ್ಸಾಹ ಬೆಳೆಸಲೆಂದೇ ಈ ದಸರಾ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸದ್ಯದಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್​ ಚಾಂಪಿಯನ್​ಷಿಪ್​ ಆಯೋಜಿಸಲಾಗುವುದು ಎಂದರು. ಅಂತಾರಾಷ್ಟ್ರೀಯ ಅಥ್ಲೀಟ್​ ಯಶಸ್​, ಜಿಲ್ಲಾಧಿಕಾರಿ ಶುಭಕಲ್ಯಾಣ್​, ಜಿಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ವಿ.ಅಶೋಕ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಜಿಲ್ಲಾ ಅಥ್ಲೆಟಿಕ್ಸ್​ ಸಂಸ್ಥೆಯ ಕಾರ್ಯದರ್ಶಿ ಎ.ಎನ್​.ಪ್ರಭಾಕರ್​, ತುಮುಲ್​ ಎಂಡಿ ಶ್ರೀನಿವಾಸ್​ ಉಪಸ್ಥಿತರಿದ್ದರು.

ಪುರುಷರ ವಿಭಾಗ

  1. ಗುರುಪ್ರಸಾದ್​, (ತುಮಕೂರು) 2. ಟಿ.ಎಸ್​.ಸಂದೀಪ್​ (ತುಮಕೂರು) 3. ಕೆ.ಕೆ.ವೆಂಕಟೇಶ್​ (ಬೆಂಗಳೂರು ) 4. ಪಿ.ಮಣಿಕಂಠ (ಮೈಸೂರು) 5. ಸಿ.ಎಸ್​.ಲಕ್ಷ್ಮೀಶ (ಬೆಂಗಳೂರು) 6. ಅವಧೀಶ್​ ನಿಷಾದ್​ ( ತುಮಕೂರು)

ಮಹಿಳೆಯರ ವಿಭಾಗ

  1. ಡಿ.ಆರ್​. ಸ್ಮಿತಾ (ಬೆಂಗಳೂರು) 2. ಎಂ.ರಾಶಿ ( ಬೆಂಗಳೂರು ) 3. ಪ್ರಿಯಾಂಕ (ಬೆಂಗಳೂರು) 4. ಎಸ್​.ಜಯಶ್ರೀ (ಮೈಸೂರು) 5. ಎಸ್​.ಎಂ.ಸಾನಿಕಾ (ತುಮಕೂರು ) 6. ಎಂ.ಸೌಮ್ಯ (ಬೆಂಗಳೂರು)