filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38; 
ಜಿಲ್ಲೆ

ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

ಮೈಸೂರು : ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.


ಮೂರು ದಿನಗಳ ಕಾಲ ಅಭಿಯಾನ ನಡೆಯಲಿದ್ದು, ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ದೊರಕಿತು. ತಾಲೂಕಿನ ವಿವಿಧೆಡೆಯಿಂದ ಯುವಕ, ಯುವತಿಯರು ಸೇರಿದಂತೆ ಗ್ರಾಮೀಣ ಪ್ರದೇಶದ 100ಕ್ಕೂ ಹೆಚ್ಚು ಜನರು ಹೇರ್ ಕಲರಿಂಗ್ ಮಾಡಿಸಿಕೊಂಡರು.

ಹೇರ್ ಕಲರ್ ಮಾಡಿಸಿಕೊಂಡ ಭೋಗೇಶ್ವರ ಕಾಲನಿ ಗ್ರಾಮದ ಕಾಳಪ್ಪಾಜಿ ಮಾತನಾಡಿ, ಹೇರ್ ಕಲರಿಂಗ್ ಕಂಪನಿ ಗಾರ್ನಿಯರ್, ವಿಜಯವಾಣಿ ಸಹಯೋಗದೊಂದಿಗೆ ಅಭಿಯಾನ ಪ್ರಾರಂಭಿಸಿ ಉಚಿತವಾಗಿ ಹೇರ್ ಕಲರಿಂಗ್ ಮಾಡಿಕೊಡುತ್ತಿದೆ. ಪತ್ರಿಕೆ ಓದುಗರಿಗೆ ಸುದ್ದಿಗಳನ್ನು ಕಟ್ಟಿಕೊಡುವುರ ಜತೆಗೆ ಇಂತಹ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಸೇವಾ ಕಾರ್ಯವನ್ನು ವಿಜಯವಾಣಿ ಪತ್ರಿಕೆ ಮುಂದುವರಿಸಲಿ ಎಂದು ಆಶಿಸಿದರು.