ಜಿಲ್ಲೆ

ಗಾರ್ನಿಯರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ

ಮಂಜುನಾಥ ಅಂಗಡಿ

ಧಾರವಾಡ: ಪ್ರತಿಷ್ಠಿತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ನಗರದ ರೈಲ್ವೆ ಸ್ಟೇಷನ್ ರಸ್ತೆಯ ಕರ್ನಾಟಕ ಬ್ಯಾಂಕ್ ಹತ್ತಿರದ ತನಿಕ್ಷಾ ಅಕಾಡೆಮಿಯಲ್ಲಿ ಬೆಳಗ್ಗೆ ೧೦ರಿಂದ ೫ರವರೆಗೆ ನಡೆದ ಅಭಿಯಾನದಲ್ಲಿ ಸಾರ್ವಜನಿಕರು ಉಚಿತ ಗಾರ್ನಿಯರ್ ಹೇರ್ ಕಲರಿಂಗ್ ಮಾಡಿಸಿಕೊಂಡರು. ಕಂಪನಿಯ ಪರಿಣಿತರು ಪುರುಷ ಮತ್ತು ಮಹಿಳೆಯರಿಗೆ ಉಚಿತ ಹೇರ್ ಕಲರಿಂಗ್ ಮಾಡಿದರು. ನೂರಾರು ಪುರುಷ- ಮಹಿಳೆಯರು ಅಭಿಯಾನದ ಪ್ರಯೋಜನ ಪಡೆದುಕೊಂಡರು.
ತನಿಕ್ಷಾ ಅಕಾಡೆಮಿಯಲ್ಲಿ ಮೇ ೧೦ರಂದು ಹೇರ್ ಕಲರಿಂಗ್ ಅಭಿಯಾನ ಮುಂದುವರಿಯಲಿದೆ.