ಹುಬ್ಬಳ್ಳಿ : ಇಲ್ಲಿನ ಕೆನರಾ ಬ್ಯಾಂಕ್ ವೃತ್ತ ಕಚೇರಿಯಿಂದ ‘ಕೆನರಾ ಮೆಗಾ ರಿಟೈಲ್ ಎಕ್ಸ್ಪೋ’ ಲೋನ್ ಮೇಳವನ್ನು ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಮೈಕ್ರೋ ಫಿನಿಶ್ ವಾಲ್ವಸ್ ಕಂಪನಿ ಚೇರ್ಮನ್ ತಿಲಕ ವಿಕ್ರಂಸಿ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಡಿಜಿಎಂ ಜೆ.ಪಿ. ಪಾನಿಗ್ರಹಿ, ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಎಜಿಎಂ ಸಜಲ ಸಮೀರ ಅತಿಥಿಗಳಾಗಿದ್ದರು.
ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ, ಶೈಕ್ಷಣಿಕ ಸಾಲ ಹಾಗೂ ವಾಹನ ಸಾಲವನ್ನು ನೀಡುವ ಉದ್ದೇಶದಿಂದ ಆಯೋಜಿಸಿದ್ದ ಈ ಲೋನ್ ಮೇಳದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಕೆನರಾ ಬ್ಯಾಂಕ್ನಿಂದ ನೀಡುವ ಕಡಿಮೆ ಬಡ್ಡಿ ದರದ ಸಾಲದ ಮಾಹಿತಿಯನ್ನು ಸಾರ್ವಜನಿಕರು ಪಡೆದರು. ಸಾಲಕ್ಕೆ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ಪಡೆದು, ಕೆಲವರು ದಾಖಲೆಗಳನ್ನೂ ಒದಗಿಸಿದರು. ಲೋನ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂಧನೆ ದೊರೆಯಿತು.