ಜಿಲ್ಲೆ

ಬಿಡಿಎ ಫ್ಲ್ಯಾಟ್ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

ಆರ್.ತುಳಸಿಕುಮಾರ್

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಶನಿವಾರ ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಿರುವ ಫ್ಲ್ಯಾಟ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಫ್ಲ್ಯಾಟ್ ಮೇಳದಲ್ಲಿ ನಾಗರಬಾವಿ ಚಂದ್ರಾ ಬಡಾವಣೆಯಲ್ಲಿ 3 ಬಿಎಚ್‌ಕೆ ಘಟಕಗಳಲ್ಲಿ ಕೆಲವು ಫ್ಲ್ಯಾಟ್ ಗಳು ಮಾತ್ರ ಹಂಚಿಕೆಗೆ ಲಭ್ಯವಿದ್ದು, ಉಳಿದವುಗಳು ಮಾರಾಟವಾಗಿವೆ. ಕಣಿಮಿಣಿಕೆಯಲ್ಲಿ 2 ಬಿಎಚ್‌ಕೆ ಘಟಕಗಳು ಮತ್ತು ಕೋನದಾಸಪುರ ಹಂತ-2ರ 2 ಬಿಎಚ್‌ಕೆ ಘಟಕಗಳು ಹಂಚಿಕೆಗೆ ಲಭ್ಯವಿದ್ದು, ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗಿದೆ.

ಫ್ಲ್ಯಾಟ್ ಮೇಳವು ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ನಡೆಸಲಾಗುತ್ತಿದ್ದು, ಪೂರ್ವಾಹ್ನದಲ್ಲಿಯೇ ಅತಿ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಮೇಳದಲ್ಲಿ ಒಟ್ಟಾರೆಯಾಗಿ 25 ಫ್ಲ್ಯಾಟ್ ಗಳು ಸ್ಥಳದಲ್ಲಿಯೇ ಮಾರಾಟವಾಗಿ 15 ನಾಗರಿಕರು ಹಂಚಿಕೆ ಪತ್ರವನ್ನು ಸ್ವೀಕರಿಸಿದ್ದಾರೆ.

ಈ ಫ್ಲ್ಯಾಟ್ ಮೇಳದಲ್ಲಿ ಸುಮಾರು 5 ಬ್ಯಾಂಕ್‌ಗಳು ಭಾಗವಹಿಸಿದ್ದು, ಪ್ರತಿ ಬ್ಯಾಂಕ್‌ಗಳಿಗೆ ಸಾಲ ಸೌಲಭ್ಯಕ್ಕಾಗಿ 10 ಅರ್ಜಿಗಳು ಸ್ವೀಕೃತಗೊಂಡಿವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.