ಕಾರಟಗಿ ಪುರಸಭೆ ಕಚೇರಿಯಲ್ಲಿ ವರ್ಗಾವಣೆಗೊಂಡ ಹಿಂದಿನ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸಿಬ್ಬಂದಿ ಆದೆಪ್ಪ, ಸಮೀರ್, ಪರಮೇಶ್ವರಪ್ಪ ಇದ್ದರು. 
ಜಿಲ್ಲೆ

ಉತ್ತಮ ಬಾಂಧವ್ಯದೊಂದಿಗೆ ಕಾರ್ಯ ನಿರ್ವಹಿಸಿ

Kopala - Desk - Eraveni

ಕಾರಟಗಿ: ಪಟ್ಟಣದ ಪುರಸಭೆ ಹಿಂದಿನ ಮುಖ್ಯಾಧಿಕಾರಿ ಸುರೇಶ್ ಶೆಟ್ಟರ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿ ಶನಿವಾರ ಗೌರವಿಸಿ ಬೀಳ್ಕೊಟ್ಟರು.

ನಂತರ ಸುರೇಶ್ ಶೆಟ್ಟರ್ ಮಾತನಾಡಿ, ಕಳೆದ ಕೆಲ ತಿಂಗಳುಗಳ ಕಾಲ ಪಟ್ಟಣದಲ್ಲಿ ಕೆಲಸ ಮಾಡಿದ್ದು, ತೃಪ್ತಿ ತಂದಿದೆ. ಉತ್ತಮ ಬಾಂಧವ್ಯದೊಂದಿಗೆ ಸರ್ವರು ಕಾರ್ಯನಿರ್ವಹಿಸಿ. ಸರ್ಕಾರದ ನಾನಾ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಸಕಾಲಕ್ಕೆ ಶ್ರಮಿಸಬೇಕು.

ಈವರೆಗೆ ಕಾರ್ಯ ನಿರ್ವಹಿಸಲು ಪ್ರತಿಯೊಬ್ಬರೂ ಸಹಕಾರ ನೀಡಿದ್ದೀರಿ. ಮುಂದಿನ ಮುಖ್ಯಾಧಿಕಾರಿ ಜೊತೆಗೂ ಸ್ನೇಹ ಸಂಬಂಧ ಹಾಗೂ ಸೌಹಾರ್ದಯುತವಾಗಿ ನಡೆಯುವ ಮೂಲಕ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ ಎಂದರು. ಪುರಸಭೆ ಅಧ್ಯಕ್ಷೆ ರೇಖಾ ರಾಜಶೇಖರ ಆನೆಹೊಸೂರು, ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕಾರ್, ಸಿಬ್ಬಂದಿ ಆದೆಪ್ಪ, ಸಮೀರ್, ಪರಮೇಶ್ವರಪ್ಪ, ಮಂಜುನಾಥ, ಮಂಜಮ್ಮ ಇತರರಿದ್ದರು.