ಜಿಲ್ಲೆ

ಮಳೆಯಿಂದ ಜಲಾಶಯಗಳಿಗೆ ಜೀವ ಕಳೆ

ಬೆಳಗಾವಿ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದ್ದು, ಜಿಲ್ಲೆಯ ಜಲಾಶಯಗಳಿಗೆ ಜೀವಕಳೆ ಬಂದಿದೆ.ಹಿಡಕಲ್ ಜಲಾಶಯದಲ್ಲಿ 2121.55 ಅಡಿ ನೀರು ಬಂದಿದೆ. ಒಟ್ಟು 17.88 ಟಿಎಂಸಿ ನೀರು ಸಂಗ್ರವಾಗಿದೆ. ಮಳೆಯಿಂದಾಗಿ ಒಂದೇ ವಾರದಲ್ಲಿ 10 ಟಿಎಂಸಿ ನೀರು ಹೆಚ್ಚಾಗಿದೆ. ಡ್ಯಾಂಗೆ 29.501 ಕ್ಯೂಸೆಕ್ ನೀರಿನ ಒಳಹರಿವಿದೆ. ಡ್ಯಾಂನಿಂದ 98 ಕ್ಯೂಸೆಕ್ ನೀರು ಕುಡಿಯುವ ಉದ್ದೇಶಕ್ಕಾಗಿ ಹೊರ ಬಿಡಲಾಗುತ್ತಿದೆ. ಒಟ್ಟಾರೆ ಜಲಾಶಯವು ಶೇ. 35.06ರಷ್ಟು ಭರ್ತಿಯಾಗಿದೆ.
ಮಲಪ್ರಭಾ ಜಲಾಶಯದಲ್ಲಿ 2051.90 ಅಡಿಯಷ್ಟು ನೀರು ಬಂದಿದೆ. ಡ್ಯಾಂಗೆ 13,840 ಕ್ಯೂಸೆಕ್ ನೀರಿನ ಒಳಹರಿವಿದೆ. ಒಟ್ಟು 10.880 ಟಿಎಂಸಿ ನೀರು ಸಂಗ್ರಹವಾಗಿದೆ. 194 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಟ್ಟಾರೆ ಜಲಾಶಯವು ಶೇ.28.83 ರಷ್ಟು ಭರ್ತಿಯಾಗಿದೆ.