ಜಿಲ್ಲೆ

ಉತ್ತಮ ಮಳೆ: ಆರೆಂಜ್ ಅರ್ಲಟ್ ಘೋಷಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದು, ಹವಾಮಾನ ಇಲಾಖೆ ಆ.೧೮ರವರೆಗೆ ಆರೆಂಜ್ ಅರ್ಲಟ್ ಘೋಷಣೆ ಮಾಡಿದೆ.

ಭಾನುವಾರ ಮಡಿಕೇರಿ ನಗರ ಸೇರಿದಂತೆ ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ತಾಲೂಕಿನಾದ್ಯಮತ ಉತ್ತಮ ಮಳೆಯಾಗಿದೆ. ಮಲೆಯೊಂದಿಗೆ ಗಾಳಿಯೂ ರಬಸವಾಗಿ ಬೀಸುತ್ತಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ಭಾನುವಾರ ಮತ್ತು ಸೋಮವಾರದಂದು ಆರೆಂಜ್ ಅರ್ಲಟ್ ಘೋಷಣೆ ಮಾಡಿದೆ.

ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪೪.೭೬ ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೫೩.೬೦ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೩೪.೬೦ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೪೨.೨೫ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೬೭.೯೫ ಮಿ.ಮೀ, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೨೫.೪೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೫೫, ನಾಪೋಕ್ಲು ೪೧.೨, ಸಂಪಾಜೆ ೭೭, ಭಾಗಮಂಡಲ ೪೧, ವಿರಾಜಪೇಟೆ ೪೧.೨, ಅಮ್ಮತ್ತಿ ೨೮, ಹುದಿಕೇರಿ ೪೧.೯, ಶ್ರೀಮಂಗಲ ೮೩, ಪೊನ್ನಂಪೇಟೆ ೨೩, ಬಾಳೆಲೆ ೨೧.೦೯, ಸೋಮವಾರಪೇಟೆ ೩೮.೨, ಶನಿವಾರಸಂತೆ ೭೬, ಶಾಂತಳ್ಳಿ ೭೫, ಕೊಡ್ಲಿಪೇಟೆ ೮೨.೬, ಕುಶಾಲನಗರ ೧೬.೮, ಸುಂಟಿಕೊಪ್ಪ ೩೪ ಮಿ.ಮೀಮಳೆಯಾಗಿದೆ.

ಹಾರಂಗಿ ಜಲಾಶಯದ ಗರಿ? ಮಟ್ಟ ೨,೮೫೯ ಅಡಿಗಳಿದ್ದು, ೨೮೫೭.೨೦ ಅಡಿ ನೀರು ಸಂಗ್ರಹವಾಗಿದೆ. ಇಂದಿನ ನೀರಿನ ಒಳಹರಿವು ೮೭೨೮ ಕ್ಯುಸೆಕ್‌ಇದ್ದು, ಹೊರ ಹರಿವು ನದಿಗೆ ೭೮೧೨ ಕ್ಯುಸೆಕ್, ನಾಲೆಗೆ ೫೦೦ ಕ್ಯುಸೆಕ್ ಬಿಡಲಾಗುತ್ತಿದೆ.

ನಾಳೆ ರಜೆ: ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಆ.೧೮ ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.