ಶಹಾಬಾದ್: ಜಗತ್ತಿನ ಎಲ್ಲ ಭಾಷೆಗಳಲ್ಲಿ ಕನ್ನಡ ಸಮೃದ್ಧವಾಗಿದ್ದು, ಸಾಹಿತ್ಯ ರಚನೆಗೆ ಸೂಕ್ತ ಭಾಷೆಯಾಗಿದೆ ಎಂದು ಜಿ.ಆರ್.ಗೊಳೇದ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಹೇಳಿದರು.
ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಸಂಜೆ ಆಯೋಜಿಸಿದ್ದ ಸುವರ್ಣ ರಾಜ್ಯೋತ್ಸವ ಕವಿ ಗೋಷ್ಠಿಯಲ್ಲಿ ಮಾತನಾಡಿ, ವಿಷಯ ಹಾಗೂ ಭಾಷೆ ಬಗ್ಗೆ ಸಮಗ್ರ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಕಾವ್ಯ ಹೊರಹೊಮ್ಮಲು ಸಾಧ್ಯ ಎಂದು ತಿಳಿಸಿದರು.
ಕೂಡಲ ಸಂಗಮ ಶಿಕ್ಷಣ ಸಂಸ್ಥೆ ಉಪನ್ಯಾಸಕ ಪೀರ್‌ಪಾಶಾ ಮಾತನಾಡಿ, ಆಂಗ್ಲ ಪ್ರೇಮದಿಂದ ಕನ್ನಡ ಶಾಲೆ ಅದರಲ್ಲೂ ಸರ್ಕಾರಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಸೊರಗುತ್ತಿವೆ. ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ ಭಾಷೆ ನಮ್ಮದು. ಹಲವಾರ ಪ್ರಥಮಗಳಿಗೆ ಕನ್ನಡ ಭಾಷೆ ಸಾಕ್ಷಿಯಾಗಿದೆ. ಇಂತಹ ಭಾಷೆಯನ್ನು ಉಳಿಸುವ, ಬೆಳೆಸುವ ಕೆಲಸ ನಮ್ಮಿಂದಾಗಬೇಕು ಎಂದರು.
ಕವಿಗಳಾದ ರಾಜಶೇಖರ ದೇವರಮನಿ, ವಾಸುದೇವ ಚವ್ಹಾಣ್, ಪ್ರತಿಭಾ ರಾಜಶೇಖರ, ಗಿರಿಮಲ್ಲಪ್ಪ ವಳಸಂಗ, ಕೆ.ರಮೇಶ ಭಟ್ಟ, ರಾಜಕುಮಾರ ಕವನ ವಾಚಿಸಿದರು. ಉದ್ಯಮಿ ಭೀಮರಾವ ಮೇಟಿ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಕೋಬಾಳ, ಪ್ರಮುಖರಾದ ಶರಣಗೌಡ ಪೊಲೀಸ್ ಪಾಟೀಲ್ (ಗೋಳಾ-ಕೆ), ಚಂದ್ರಕಾAತ ಗೊಬ್ಬುರಕರ, ರತನ ರಾಜ, ಗಂಗಾಧರ, ಕನಕಪ್ಪ ದಂಡಗುಲಕರ್, ಗುರು ಪ್ರಸಾದ ಕೋಬಾಳ, ಬಸವರಾಜ ಕೊಳ್ಳೂರ, ರಾಜು ಕೋಬಾಳ ಇತರರಿದ್ದರು. ಶರಣು ವಸ್ತçದ ನಿರೂಪಣೆ ಮಾಡಿದರು. ವಾಸುದೇವ ಚವ್ಹಾಣ್ ಸ್ವಾಗತಿಸಿದರು. ಬಾಬುರಾವ ಪಂಚಾಳ ವಂದಿಸಿದರು.