ಸಿಂಧನೂರಿನ ಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಸಿಂಧನೂರು ಎ ವಲಯದ ಪ್ರೌಢ ಶಾಲೆ ಮಕ್ಕಳ ಕ್ರೀಡಾಕೂಟವನ್ನು ದೈಹಿಕ ಶಿಕ್ಷಣ ನಿರ್ದೇಶಕ ಸೋಮಲಿಂಗಪ್ಪ ಉದ್ಘಾಟಿಸಿದರು. ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್, ಹರಿಜನ ಗಿರಿಜನ ಸೇವಾ ಸಂಘದ ಅಧ್ಯಕ್ಷ ಮೋಹನ್ ಎಂ.ಹೊಸಮನಿ, ಮುಖ್ಯಶಿಕ್ಷಕಿ ಉರ್ಮಿಳಾ ದೇಸಾಯಿ, ದೈಹಿಕ ಶಿಕ್ಷಣ ಶಿಕ್ಷಕ ಎಚ್.ಎಫ್.ಮಸ್ಕಿ ಇದ್ದರು. 
ಜಿಲ್ಲೆ

ಉತ್ತಮ ವ್ಯಕ್ತಿತ್ವ ರೂಪಗೊಳ್ಳಲು ಕ್ರೀಡೆ ಸಹಕಾರಿ

ರುದ್ರಪ್ಪ ವಾಲಿ

ಸಿಂಧನೂರು: ಮಕ್ಕಳಲ್ಲಿ ಪಠ್ಯದ ಜತೆಗೆ ಕ್ರೀಡಾಸಕ್ತಿ ಹೆಚ್ಚಿಸುವಂಥ ಚಟುವಟಿಕೆ ರೂಪಿಸಬೇಕು ಎಂದು ನಿವೃತ್ತ ಶಿಕ್ಷಕ ವೆಂಕನಗೌಡ ವಟಗಲ್ ಹೇಳಿದರು.

ನಗರದ ಶ್ರೀ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಗುರುವಾರ ಸಿಂಧನೂರು ಎ ವಲಯದ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದರು.

ಕ್ರೀಡಾ ಧ್ವಜಾರೋಹಣ ನೆರವೇರಿಸಿ ದೈಹಿಕ ಶಿಕ್ಷಣ ನಿರ್ದೇಶಕ ಸೋಮಲಿಂಗಪ್ಪ ಮಾತನಾಡಿ, ಶಾಲೆಯಿಂದಲೇ ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೈಹಿಕ, ಮಾನಸಿಕ ಬಲ ಪಡೆಯಬಹುದಾಗಿದೆ. ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು ಎಂದು ತಿಳಿಸಿದರು.

ಹರಿಜನ-ಗಿರಿಜನ ಸೇವಾ ಸಂಘದ ಅಧ್ಯಕ್ಷ ಮೋಹನ್ ಎಂ.ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಶಿಕ್ಷಕ ಪ್ರಶಾಂತ ಪಾಟೀಲ್ ಇತರರಿದ್ದರು. ಪ್ರಮುಖರಾದ ಚೇತನ ಅಲಗೂರು, ಶಿಕ್ಷಕ ಪಿ.ಎಲ್.ಪಾತ್ರೋಟಿ, ಪ್ರಶಿಕ್ಷಕಿ ಶ್ವೇತಾ ಇತರರಿದ್ದರು.