ವಿಜಯಪುರ : ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ, ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್ಎಸ್ಎಸ್ ಟಕ, ರೆಡ್ ರಿಬ್ಬನ್ ಕ್ಲಬ್ಗಳ ವತಿಯಿಂದ ನಗರದ ಐತಿಹಾಸಿಕ ಗೋಲ್ ಗುಂಬಜ್ ಆವರಣದಲ್ಲಿ 2025ರ ಯುವ ಜನೋತ್ಸವದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡ ಮ್ಯಾರಥಾನ್ನಲ್ಲಿ ಇಲ್ಲಿನ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.
ಕಾಲೇಜಿನ ಸುಮಾರು 25ಕ್ಕೂ ಅಧಿಕ ಎನ್ಎಸ್ಎಸ್ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಜಿಲ್ಲಾ ಯರೋಗ ನಿಯಂತ್ರಣ ಅಧಿಕಾರಿ ಡಾ. ಮಲ್ಲನಗೌಡ ಪಾಟೀಲ, ಜಿಲ್ಲಾ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಪ್ರಶಂಶಿಸಿದ್ದಾರೆ. ಎನ್ಎಸ್ಎಸ್ ಅಧಿಕಾರಿ ವಿಜಯಕುಮಾರ ತಳವಾರ, ಪ್ರದಿಪ ಕುಂಬಾರ ಮತ್ತಿತರರಿದ್ದರು.
ಯುವ ಜನೋತ್ಸವದ ಅಂಗವಾಗಿ ನಡೆದ ಮ್ಯಾರಥಾನ್ನಲ್ಲಿ ಸಾಧನೆಗೈದ ವಿಜಯಪುರದ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಕಾಲೇಜಿಬನ ಸಿಬ್ಬಂದಿಗಳಿದ್ದಾರೆ.