ಬೆಳಗಾವಿ: ಹಾಸನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿಬಿಎಸ್ಇ ದಕ್ಷಿಣ ವಲಯ ಚಾಂಪಿಯನ್ಶಿಪ್ನ ಈಜು ಸ್ಪರ್ಧೆಯಲ್ಲಿ ಇಲ್ಲಿನ ಸ್ವಿಮ್ಮರ್ಸ್ ಕ್ಲಬ್ ಮತ್ತು ಅಕ್ವಾರಿಯಸ್ ಸ್ವಿಮ್ ಕ್ಲಬ್ನ ಈಜುಪಟುಗಳು 1 ಚಿನ್ನ ಹಾಗೂ ನಾಲ್ಕು ಬೆಳ್ಳಿ ಪದಕಗಳನ್ನು ಗೆದ್ದುಕೊಂಡು, ಸಿಬಿಎಸ್ಇ ರಾಷ್ಟ್ರಮಟ್ಟದ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.
ಬಟರ್ ಫ್ಲೆ ಸ್ಟ್ರೊಕ್ ವಿಭಾಗದಲ್ಲಿ ಜ್ಯೋತಿ ಸೆಂಟ್ರಲ್ ಸ್ಕೂಲ್ನ ವೇದಾಂತ ಮೀಸಾಳೆ ಒಂದು ಚಿನ್ನ, ಎರಡು ಬೆಳ್ಳಿ ಪದಕ, ಕೆಎಲ್ಇ ಪಬ್ಲಿಕ್ ಶಾಲೆಯ ನಿಧಿ ಕುಲಕರ್ಣಿ ಮತ್ತು ಕೆಎಲ್ಇ ಇಂಟರ್ನ್ಯಾಷನಲ್ ಸ್ಕೂಲ್ನ ರೇಹಾ ಪೋರವಾಲ್ ತಲಾ ಒಂದೊಂದು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಕೋಚ್ ಉಮೇಶ ಕಲಟಗಿ, ಅಕ್ಷಯ ಶೇರೆಗಾರ, ಅಂಜಿಕ್ಯಾ ಮೆಂಡಕೆ, ನಿತೀಶ ಕುಡಚಕರ, ಗೋವರ್ಧನ ಕಾಕತಕರ, ಇಮ್ರಾನ್ ಉಚಗಾಂವಕರ, ವಿನಾಯಕ ಅಂಬೇವಾಡಿಕರ ಅವರು ಈ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಜಯಭಾರತ ಫೌಂಡೇಶನ್ ಅಧ್ಯಕ್ಷ ಜಯಂತ ಹುಂಬರವಾಡಿ, ಅವಿನಾಶ ಪೋತದಾರ, ಮನಕ್ ಕಪಾಡಿಯಾ, ಲತಾ ಕಿತ್ತೂರ, ಸುಧೀರ ಕುಸನೆ, ಪ್ರಸಾದ ತೆಂಡೂಲ್ಕರ ಇತರರು ಅಭಿನಂದಿಸಿದ್ದಾರೆ.