ಶಿಗ್ಗಾಂವಿ: ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 18ನೇ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪಟ್ಟಣದ ಫಿನಿಕ್ಸ್ ಶಾಲೆಯ ವಿದ್ಯಾರ್ಥಿಗಳು ಕಟಾ ಹಾಗೂ ಕುಮಿಟೆ ವಿಭಾಗಗಳಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದಿದ್ದಾರೆ.
ಕಟಾ ವಿಭಾಗದಲ್ಲಿ ಶುಭಂ ಎಲ್. ಗೊಂಗಲ ಹಾಗೂ ಚಕ್ರವರ್ತಿ ವೈ. ಗೋಣೆನವರ ದ್ವಿತೀಯ. ಚರಣ್ ಕೆ.ಎಂ., ಹರೀಶಕುಮಾರ ನಾಯಕ, ಯುಕ್ತಾ ಎಸ್. ಬಡಿಗೇರ ಹಾಗೂ ವೈಷ್ಣವಿ ಬಿ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ. ಕುಮಿಟೆ ವಿಭಾಗದಲ್ಲಿ ಚರಣ್ ಮೂರನೇ ಸ್ಥಾನ ಪಡೆದಿದ್ದಾರೆ.
ರಮೇಶ ಕಬ್ಬೇರ ತರಬೇತಿ ನೀಡಿದ್ದರು.