ಮದ್ದೂರು: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ಕೌಡ್ಲೆಯ ಛೇರ‌್ಮನ್ ಚಿಕ್ಕಚನ್ನೇಗೌಡ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಉತ್ತಮ ಫಲಿತಾಂಶ ಲಭಿಸಿದೆ.
ಜಿ.ಆರ್.ದಿವ್ಯಶ್ರೀ 565 (ಶೇ.90.40), ಎಸ್.ಕಾವ್ಯಾ 564 (ಶೆ.90.24), ಎಸ್.ದೀಪಾಂಜಲಿ ( ಶೇ. 78.72), ಎಂ.ಕೆ.ರವಿತ್ 483 (ಶೇ.77.38) ಹಾಗೂ ಎಸ್.ಲಕ್ಷ್ಮೀದೇವಿ 457 (ಶೇ.73.12) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಶಾಲೆಯಲ್ಲಿ ಒಟ್ಟು 16 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅತ್ಯುತ್ತಮ 2, ಪ್ರಥಮ 5, ದ್ವಿತೀಯ 4 ಹಾಗೂ ಸಾಮಾನ್ಯ ದರ್ಜೆಯಲ್ಲಿ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕಿ ಎಂ.ಎಸ್.ಸವಿತಾ ತಿಳಿಸಿದ್ದಾರೆ.