ಹಳಿಯಾಳ: ಯಾವಾಗಲೂ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಸ್ಪರ್ಧಿಸಬೇಕು ಎಂದು ಹಳಿಯಾಳದ ಕೆಎಲ್ಎಸ್ ವಿಡಿಐಟಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಹೇಳಿದರು.
ಪಟ್ಟಣದ ಕೆಎಲ್ಎಸ್ವಿಡಿಐಟಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಮಹಿಳಾ ವಿಭಾಗದ ಬಾಸ್ಕೆಟ್ ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರೊ. ಮಂಜುನಾಥ, ಡಾ. ಮಹೇಂದ್ರ ದೀಕ್ಷಿತ್, ಡಾ ಆಶಿಕ್ ಬಳ್ಳಾರಿ, ಪ್ರೊ. ಎಸ್.ಡಿ. ಕುಲಕರ್ಣಿ ಇದ್ದರು.
ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಎನ್ಐಇ ಮೈಸೂರು, ಎಸ್ಡಿಎಂಸಿಇಟಿ ಧಾರವಾಡ, ಎಸ್ಜೆಸಿಇ ಮಂಗಳೂರು ಹಾಗೂ ವಿಡಿಐಟಿ ಹಳಿಯಾಳ ಬೆಂಗಳೂರಿನಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಪಂದ್ಯಾವಳಿಗೆ ಆಯ್ಕೆಯಾಗಿದೆ.
ಕೆಎಲ್ಎಸ್ ವಿಡಿಐಟಿ ತಂಡವನ್ನು ಸೌಭಾಗ್ಯ ಎ., ಸಂಜನಾ ಡಿ., ಸುಪ್ರೀತಾ ಎಚ್., ಶ್ರೀಲಕ್ಷ್ಮಿ ಎಂ., ಉಮಾ ಎಚ್., ಸ್ನೇಹಾ ಡಿ., ನಿಕಿತಾ ಕೆ., ಶ್ರಾವಣಿ ಎಸ್., ಮೇಘಾ ಪಿ. ಪ್ರತಿನಿಧಿಸಿದ್ದರು.