ಅಳವಂಡಿಯಲ್ಲಿ ಗ್ರಾಪಂನಿಂದ ಹಮ್ಮಿಕೊಂಡಿದ್ದ ವಿಕಲಚೇತನ ಗ್ರಾಮ ಸಭೆಯಲ್ಲಿ ಪಿಡಿಒ ಕೊಟ್ರಪ್ಪ, ಪ್ರಮುಖರಾದ ಶಂಕ್ರಮ್ಮ, ವೀರೇಶ, ಸಿದ್ದಲಿಂಗಯ್ಯ, ಕೊಟ್ರಪ್ಪ, ಬಸವರಾಜ, ಪರಶುರಾಮ, ತೋಟಯ್ಯ, ಗೀತಾ, ಚೆನ್ನಮ್ಮ ಇತರರಿದ್ದರು. 
ಜಿಲ್ಲೆ

ಉತ್ತಮ ಬದುಕಿಗೆ ಯೋಜನೆಗಳ ಲಾಭ ಪಡೆಯಿರಿ

Kopala - Desk - Eraveni

ಅಳವಂಡಿ: ವಿಕಲಚೇತನರು ಸರ್ಕಾರದ ಸೌಲಭ್ಯ ಪಡೆದು ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂದು ಕಾರ್ಗಿಲ್ ಮಲ್ಲಯ್ಯ ಅಂಗವಿಕಲ ಸಂಘದ ಪ್ರಧಾನ ಕಾರ್ಯದರ್ಶಿ ವೀರೇಶ ಹಾಲಗುಂಡಿ ತಿಳಿಸಿದರು.

ಗ್ರಾಮದಲ್ಲಿ ಜಿಪಂ, ತಾಪಂ, ಗ್ರಾಪಂ ಅಳವಂಡಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆಯಲ್ಲಿ ಶುಕ್ರವಾರ ಮಾತನಾಡಿದರು.

ವಿಕಲಚೇತನರ ಸಾಧನ ಸಲಕರಣೆ, ಲ್ಯಾಪ್‌ಟ್ಯಾಪ್ ವಿತರಣೆ, ದೃಷ್ಟಿ ದೋಷ ವಿಕಲಚೇತನರಿಗೆ ಶಿಶು ಪಾಲನೆ ಭತ್ತೆ, ಬ್ರೈನ್ ಕಿಟ್ ಯೋಜನೆ, ಶ್ರವಣ ನ್ಯೂನತೆ ಉಳ್ಳವರಿಗೆ ಹೊಲಿಗೆ ಯಂತ್ರ ವಿತರಣೆ, ಆಧಾರ್, ಸಾಧನೆ, ಪ್ರತಿಭಾ ಯೋಜನೆ, ಶುಲ್ಕ ಮರುಪಾವತಿ, ವಿಕಲಚೇತನ ಶಿಷ್ಯವೇತನ, ಯಂತ್ರ ಚಾಲಿತ ವಾಹನ ವಿತರಣೆ ಹಾಗೂ ವಿವಿಧ ಇಲಾಖೆಗಳ ಶೇ. 5ರಷ್ಟು ಮೀಸಲಾತಿ ಅನುದಾನದಲ್ಲಿ ವಿವಿಧ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಢರಾಗಬಹುದು.

ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ವೃತ್ತಿ ಕೌಶಲ್ಯಾಧಾರಿತ ತರಬೇತಿ ಪಡೆದು ಕೆಲಸ ಹೊಂದಬಹುದು ವಿಕಲಚೇತನರು ಕೀಳಿರಿಮೆಯಿಂದ ಹೊರ ಬಂದು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಟ್ರಪ್ಪ ಅಂಗಡಿ ಮಾತನಾಡಿ, ಸರ್ಕಾರ ವಿಕಲಚೇತನರ ಶ್ರಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಅವುಗಳನ್ನು ಸದ್ಬಳಕೆ ಪಡಿಸಿಕೊಳ್ಳಬೇಕು. ವಿಕಲಚೇತನರಿಗೆ ನರೇಗಾ ಕಾಮಗಾರಿಯಲ್ಲಿ ರಿಯಾಯಿತಿ ಇದ್ದು ಅದರ ಉಪಯೋಗ ಪಡಿಯಿರಿ ಎಂದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗೀನ, ಕಾರ್ಯದರ್ಶಿ ಬಸವರಾಜ, ಕಾರ್ಗಿಲ್ ಮಲ್ಲಯ್ಯ ಸಂಘದ ಅಧ್ಯಕ್ಷ ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಚೆನ್ನಮ್ಮ ಗಾಳಿ, ಕಾಯಕ ಮಿತ್ರ ಗೀತಾ ಕಿಲ್ಲೆದ, ಪ್ರಮುಖರಾದ ಪರಶುರಾಮ, ತೋಟಯ್ಯ ಅರಳೇಲಿಮಠ, ಶೇಕಪ್ಪ ಶೆಟ್ಟರ, ಹನುಮಂತಪ್ಪ ಎಲ್ಲಿಗಾರ, ವೆಂಕಪ್ಪ ತಳವಾರ, ಗೀತಾ, ಕ್ಯಾಂಡರು, ಬಸವರಾಜ, ಹನುಮರಡ್ಡಿ, ಶ್ರೀದೇವಿ, ಯಂಕಪ್ಪ ಇತರರಿದ್ದರು.