ಕಳಸ ಜೆಸಿಐ ಸಂಸ್ಥೆ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಶ್ರೀಕಾಂತ್ ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣವಚನ ಭೋದಿಸಿದರು. ಜಗದೀಶ್‌ನಾಯ್ಕ, ಪ್ರಶಾಂತ್ ಇದ್ದರು.  
ಜಿಲ್ಲೆ

ಜೇಸಿಐನಿಂದ ಉತ್ತಮ ನಾಯಕತ್ವ ಗುಣ ವೃದ್ಧಿ

ಜಿ.ಹೆಚ್. ಧನ್ಯಕುಮಾರ್

ಕಳಸ: ಮಾನವೀಯ ಗುಣ, ಶಿಸ್ತು ಹಾಗೂ ಕಾರ್ಯಕ್ರಮಗಳನ್ನು ರೂಪಿಸುವ ಎಲ್ಲ ಗುಣಗಳನ್ನು ಒಬ್ಬ ಜೆಸಿಐ ಸದಸ್ಯನಲ್ಲಿ ಕಾಣಬಹುದು ಎಂದು ಉದ್ಯಮಿ ಕೆ.ಕೆ. ಬಾಲಕೃಷ್ಣ ಭಟ್ ಹೇಳಿದರು.
ಕಳಸದಲ್ಲಿ ಭಾನುವಾರ ರಾತ್ರಿ ನಡೆದ ಕಳಸ ಜೆಸಿಐ ಸಂಸ್ಥೆ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಜೆಸಿಐನಲ್ಲಿ ಸಿಗುವ ತರಬೇತಿಗಳು ಈ ಸಮಾಜಕ್ಕೆ ಒಬ್ಬ ಉತ್ತಮ ನಾಯಕನ್ನು ಸೃಷ್ಟಿ ಮಾಡಬಲ್ಲದು. ತನ್ನ ವ್ಯಕ್ತಿತ್ವದ ಬದಲಾವಣೆ ಜತೆಗೆ ಸಮಾಜದ ಒಳಿತಿಗಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುತ್ತಿದೆ ಹೇಳಿದರು.
ಜೆಸಿಐ ವಲಯ 14ರ ಅಧ್ಯಕ್ಷೆ ಆಶಾಜೈನ್ ನೂತನ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ನಿರ್ಗಮಿತ ಅಧ್ಯಕ್ಷ ಚರಣ್ ಅವರಿಂದ ನೂತನ ಅಧ್ಯಕ್ಷ ಶ್ರೀಕಾಂತ್ ಅಧಿಕಾರ ಸ್ವೀಕರಿಸಿದರು.ನೂತನ ಸದಸ್ಯರಿಗೆ ವಲಯ ಉಪಾಧ್ಯಕ್ಷ ರಾಕೇಶ್ ಪ್ರಮಾಣ ವಚನ ಬೋಧಿಸಿದರು. ಆಡಳಿತ ಮಂಡಳಿ ಸದಸ್ಯರಾದ ಸುಧಾಕರ್, ಮುರುಳಿಧರ್, ಸಂತೋಷ್.ಎಂ.ಎಸ್.ವಿಜಯ್, ಶಿವಪ್ರಸಾದ್, ಸುನಿಲ್ ಆಚಾರ್ಯ, ಮಧುಗೌಡ, ಮಾರುತೇಶ್, ತನ್ವಿರ್, ಜಯಪ್ರಕಾಶ್‌ಗೆ ನೂತನ ಅಧ್ಯಕ್ಷ ಶ್ರೀಕಾಂತ್ ಪ್ರಮಾಣ ವಚನ ಬೋಧಿಸಿದರು.
ಕಳಸ ಜೆಸಿಐ ಸ್ಥಾಪಕ ಅಧ್ಯಕ್ಷ ಜಗದೀಶ್‌ನಾಯ್ಕ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಇದ್ದರು.