ಸಂಡೂರು: ಮಕ್ಕಳಿಗೆ ಮುಸ್ಲಿಂ ಸಮುದಾಯದವರು ಪ್ರೋತ್ಸಾಹ ನೀಡುವುದರಿಂದ ಕಲಿಕೆಯಲ್ಲಿ ಆಸಕ್ತಿ ಬೆಳೆಯಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಹೇಳಿದರು.
ಪಟ್ಟಣದ 14ನೇ ವಾರ್ಡಿನ ಹಳೆಯ ಚಪ್ಪರದಳ್ಳಿಯ ಜಮೀಯತ್ ಏ ಅಹ್ಲೇ ಹದೀಶ್ ಮಸ್ಜೀದ್‌ನಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ 18ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಒಂದು ಪ್ರಮುಖ ಘಟ್ಟವಾಗಿದ್ದು, ಮುಂದಿನ ಹಂತಗಳಲ್ಲಿ ಸಹ ಉತ್ತಮ ಫಲಿತಾಂಶ ಪಡೆಯುವ ಮೂಲಕ ತಾಲೂಕು, ಜಿಲ್ಲೆ, ನಾಡಿಗೆ ಕೀರ್ತಿ ತರುವಂತಾಗಬೇಕು. ವಿದ್ಯೆ ಒಂದು ಶಕ್ತಿ ಇದ್ದ ಹಾಗೆ ಒಳ್ಳೆ ಜ್ಞಾನ ಸಂಪಾದನೆ ಮಾಡಿ ಎಂದರು.
ಮುಸ್ಮಿಂ ಧರ್ಮಗುರು ಮಸ್ದಿ ಹಜರತ್ ಅತಾವುಲ್ಲಾ ಮಾತನಾಡಿ, ದೇಶದ ನಾಗರಿಕರೆಲ್ಲರೂ ಸಮಾನರಾಗಿದ್ದು, ಭಾರತೀಯರನ್ನು ಒಡೆಯುವ ಕೆಲಸ ಪಾಕಿಸ್ತಾನ ಮಾಡುತ್ತಿದೆ. ಆದಕ್ಕೆ ಕಿವಿಗೊಡದೆ ಐಕ್ಯತೆಯಿಂದಿರಿ. ಶಾಲಾ ಮಕ್ಕಳಿಗೆ ಮುಂದೆ ಗುರಿ ಹಿಂದೆ ಗುರು ಇರಬೇಕು ಎಂದರು.
ಉರ್ದು ಶಿಕ್ಷಕ ಬಾಷಾ, ವಕೀಲ ಉಮರ್ ಫಾರೂಕ್, ಪ್ರಮುಖರಾದ ಡಾ.ರಹಮತುಲ್ಲಾ, ಬಿ.ಎಂ.ಮಹಾತೇಶ್, ಕಾವ್ಯಶ್ರೀ, ಹಾಫೀಜ್ ಅಮೀನ್ ಮದನಿ, ಮಸೀದಿ ಕಮಿಟಿ ಅಧ್ಯಕ್ಷ ಕೆ.ಇರ್ಫಾನುಲ್ಲಾ, ರೆಹಮಾನ್ ಜಾಮಾಯಿ, ಎಂ.ಖಲಂದರ್ ಬಾಷಾ, ಸುಬಾನ್, ಜಾವೇದ್ ಇತರರಿದ್ದರು.