ಬೆಳ್ತಂಗಡಿ: ಎಪ್ಪತ್ತು ವರ್ಷಗಳ ಹಿಂದೆ ಸ್ಥಾಪನೆಗೊಂಡ ಶಿಶಿಲ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಗೊಂಡಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಹಳೇ ವಿದ್ಯಾರ್ಥಿಗಳು ಒಂದಾಗಿ ಶಾಲೆಯ ಏಳಿಗೆಗೆ ಪಣ ತೊಟ್ಟಿದ್ದು, ಸಾರ್ವಜನಿಕರಿಂದ ಸಹಕಾರದ ನಿರೀಕ್ಷೆಯಿದೆ ಎಂದು ಹಳೇ ವಿದ್ಯಾರ್ಥಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶಿವರಾಮ ಶಿಶಿಲ ಶಿಲಾನ್ಯಾಸ ನೆರವೇರಿಸಿ ತಿಳಿಸಿದರು.
ಶಿಶಿಲೇಶ್ವರ ದೇವಳ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮೂಡೆತ್ತಾಯ, ಎಸ್‌ಡಿಎಂಸಿ ಅಧ್ಯಕ್ಷ ಮೋಹನ್, ಪಂಚಾಯಿತಿ ಅಧ್ಯಕ್ಷ ಸುಧೀನ್ ಡಿ, ಮುಖ್ಯ ಶಿಕ್ಷಕಿ ರತ್ನ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಕರುಣಾಕರ ಶಿಶಿಲ, ಹತ್ಯಡ್ಕ ಪ್ರಾ ಕೃ ಪ ಸ ಸಂಘ ನಿರ್ದೇಶಕ ಕೊರಗಪ್ಪ ಗೌಡ, ಪಿಡಿಒ ದಿನೇಶ್ ಎಂ, ನಿವೃತ ಶಿಕ್ಷಕಿ ಶಾರದಾ ಕೆ.ವಿ., ಶಾಲಾ ಹಳೇ ವಿದ್ಯಾರ್ಥಿಗಳು, ಶಿಕ್ಷಕರು, ಊರವರು ಉಪಸ್ಥಿತರಿದ್ದರು.
ಶಿಲಾನ್ಯಾಸದ ಪೌರೋಹಿತ್ಯವನ್ನು ಶ್ರೀಪತಿ ನೆಲ್ಲಿತ್ತಾಯ ನೆರವೇರಿಸಿದರು. ಮುಖ್ಯ ಶಿಕ್ಷಕಿ ರತ್ನ ಸ್ವಾಗತಿಸಿದರು.