ಜಿಲ್ಲೆ

ಆಯುರ್ವೇದ ಚಿಕಿತ್ಸೆಯಿಂದ ಉತ್ತಮ ಆರೋಗ್ಯ

ಬೈಲಹೊಂಗಲ: ಋಷಿ ಮುನಿಗಳ ಕಾಲದಿಂದ ರೂಢಿಯಲ್ಲಿರುವ ಆಯುರ್ವೇದ ಚಿಕಿತ್ಸೆ ಪದ್ದತಿಯಿಂದ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು ಎಂದು ಇಂಚಲ ಶಿವಾನಂದ ಭಾರತಿ ಶಿಣ ಸಂಸ್ಥೆಯ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.

ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಗ್ರಾಮೀಣ ಆಯುರ್ವೇದಿಕ್​ ವೆದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಆಯುರ್ವೇದ ದಿನಾಚರಣೆ ಪ್ರಯುಕ್ತ ನಗರದ ಕಿತ್ತೂರು ರಾಣಿ ಚನ್ನಮ್ಮ ವತ್ತದಿಂದ ಇಂಚಲ ಮಹಾದ್ವಾರದವರೆಗೆ ಮಂಗಳವಾರ ಹಮ್ಮಿಕೊಂಡಿದ್ದ ಆಯುರ್ವೇದ ಮಹತ್ವದ ಪ್ರಚಾರ ಜನಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಯುರ್ವೇದ ವೆದ್ಯರು ಜನತೆಗೆ ಆಯುರ್ವೇದದ ಮಹತ್ವ, ಅರಿವು ಮೂಡಿಸಬೇಕೆಂದರು.

ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜಿ.ವಿನಯಮೋಹನ ಮಾತನಾಡಿ, ಆಯುರ್ವೇದದ ಬೆಳವಣಿಗೆಯಾದರೆ ಸ್ವಸ್ಥ ಸಮಾಜ ರೂಪು ತೆಳೆಯುತ್ತದೆ. ಆಯುರ್ವೇದ ಚಿಕಿತ್ಸಾ ವಿಧಾನ ಅರಿಯಬೇಕೆಂದರು.

ಪೂರ್ಣಾನಂದ ಭಾರತಿ ಸ್ವಾಮಿಗಳು ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿಗೆ ಮಾಲಾರ್ಪಣೆ ಮಾಡುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಪ್ರಾಚಾರ್ಯ ಡಾ.ಜಿ.ಎಸ್​.ಹಾದಿಮನಿ, ಮಂಜುನಾಥ ಭಟ್ಟ, ಡಾ.ಜಿ.ಎಸ್​.ಧರ್ಮಣ್ಣವರ ಹಾಗೂ ಇತರರಿದ್ದರು