ಕೋಟ: ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಕ್ರಮ, ಒತ್ತಡದ ಬದುಕಿನಿಂದಾಗಿ ಹೆಚ್ಚು ಹೆಚ್ಚು ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತಗಳು ಹೆಚ್ಚುತ್ತಿದೆ. ಆದ್ದರಿಂದ ನಾವು ಬದುಕುವ ರೀತಿ, ಸೇವಿಸುವ ಆಹಾರ ಕ್ರಮ ಒಂದು ನಿಯಮದಿಂದ ಕೂಡಿರಬೇಕು. ಅಧಿಕ ಕೊಬ್ಬನ್ನು ಹೆಚ್ಚಿಸುವ, ಆರೋಗ್ಯ ಹಾಳು ವಾಡುವ ಜಂಕ್ ಫುಡ್‌ಗಳನ್ನು ಸೇವಿಸಲೇಬಾರದು ಎಂದು ಬೆಂಗಳೂರು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ. ಪ್ರಭಾವತಿ ಹೇಳಿದರು. ಕೋಟದ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂದ ವತಿಯಿಂದ ನಡೆದ ವಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಜಗದೀಶ ನಾವಡ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಚಂದ್ರಶೇಖರ್ ಎಚ್.ಎಸ್ ವಂದಿಸಿದರು. ಜೀವಶಾಸ್ತ್ರ ಉಪನ್ಯಾಸಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಸಂ ಸಂಚಾಲಕ ರವಿಕಾರಂತ್ ಸಂಯೋಜಿಸಿದ್ದರು.