ಜಿಲ್ಲೆ

ಕರಾವಳಿಯಲ್ಲಿ ಶುಭ ಶುಕ್ರವಾರ ಆಚರಣೆ

reportermng

ಮಂಗಳೂರು: ಯೇಸುಕ್ರಿಸ್ತರು ಶಿಲುಬೆಯಲ್ಲಿ ಮರಣವನ್ನಪ್ಪಿದ ದಿನವನ್ನು ಕ್ರಿಸ್ತರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾದ್ಯಂತ ಶುಭ ಶುಕ್ರವಾರ ಎಂದು ಆಚರಿಸಿದರು.


ಯೇಸು ಕ್ರಿಸ್ತರು ಲೋಕಹಿತಕ್ಕಾಗಿ ಪ್ರಾಣ ಅರ್ಪಿಸಿದರು ಎನ್ನುವ ನಂಬಿಕೆಯಿಂದ ಕ್ರೈಸ್ತರು ಈ ದಿನವನ್ನು ಶುಭ ಶುಕ್ರವಾಗಿ ಆಚರಿಸುತ್ತಾರೆ. ಚರ್ಚ್‌ಗಳಲ್ಲಿ ಗಂಟೆಗಳ ಸದ್ದು, ಬಲಿ ಪೂಜೆ ನಡೆಯುವುದಿಲ್ಲ. ಬದಲಾಗಿ ಮೌನ ಪ್ರಾರ್ಥನೆ ನಡೆಯುತ್ತದೆ. ಈ ದಿನ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಹೆಚ್ಚಿನ ಭಕ್ತರು ಉಪವಾಸ ಮಾಡುವ ಮೂಲಕ ದಿನವನ್ನು ದೇವರಿಗೆ ಅರ್ಪಿಸಿದರು.


ಎಲ್ಲ ಚರ್ಚ್‌ಗಳಲ್ಲೂ ಬೆಳಗ್ಗಿನಿಂದ ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನ ನಡೆಯಿತು. ಎಲ್ಲ ಕಾರ್ಯಕ್ರಮಗಳಲ್ಲಿ ಕ್ರಿಸ್ತರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶಕ್ತಿನಗರದ ಮರಿಯಾಗಿರಿಯ ಮದರ್ ಆ್ ಗಾರ್ಡ್ ಚರ್ಚ್‌ನಲ್ಲಿ ಜರಗಿದ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.


ವಿಶೇಷ ಪ್ರಾರ್ಥನಾ ವಿಧಿಯಲ್ಲಿ ಪ್ರವಚನ ನೀಡಿದ ಅವರು, ಪಾಪದ ವಿಮೋಚನೆಗೆ ಯಾವುದೇ ಔಷಧ ಇಲ್ಲ. ಯಾವುದೇ ವೈದ್ಯರು, ಮನಃಶಾಸಜ್ಞರಿಂದ ಪಾಪ ವಿಮೋಚನೆ ಮಾಡಲು ಸಾಧ್ಯವಿಲ್ಲ. ದೇವರ ಪುತ್ರನಾದ ಯೇಸು ಶಿಲುಬೆಗೆ ಏರಿ ರಕ್ತ ಹರಿಸಿಕೊಂಡು ಪಾಪಿಗಳ ಪಾಪಕ್ಕೆ ವಿಮೋಚನೆ ಕೊಟ್ಟರು ಎಂದರು.


ಈ ಸಂದರ್ಭ ಚರ್ಚಿನ ಪ್ರಧಾನ ಧರ್ಮಗುರು ಾ. ಜೆರಾಲ್ಡ್ ಡಿಸೋಜ,ವರೆಸಿಡೆಂಟ್ ಧರ್ಮಗುರುಗಳಾದ ಾ. ವಿನ್ಸೆಂಟ್ ವಿನೋದ್ ಸಲ್ಡಾನ, ಾ. ಪ್ರಮೋದ್ ಕ್ರಾಸ್ತಾ ಪ್ರಾರ್ಥನಾ ವಿಧಿಯಲ್ಲಿ ಭಾಗವಹಿಸಿದರು.