oplus_140509184 
ಜಿಲ್ಲೆ

ಆಧ್ಯಾತ್ಮಿಕತೆಯಿಂದ ಉತ್ತಮ ನಡತೆ

ವಿದ್ಯಾ ಶೆಟ್ಟನಗೌಡ್ರ

ತೆಲಸಂಗ: ಆಧ್ಯಾತ್ಮಿಕ ಚಿಂತನೆಗಳು ನಮ್ಮ ನಡತೆ ಉತ್ತಮಗೊಳಿಸಿ, ವ್ಯಕ್ತಿತ್ವಕ್ಕೆ ದೈವಿಕ ಶ್ರೇಷ್ಠತೆ ತಂದುಕೊಡುತ್ತವೆ ಎಂದು ಕಕಮರಿ ಗುರುದೇವ ಆಶ್ರಮದ ಆತ್ಮರಾಮ ಶ್ರೀ ಹೇಳಿದರು.

ಗ್ರಾಮದ ರೊಟ್ಟಿ ಕಾಲನಿಯಲ್ಲಿ ಗೌರಿ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸಾರ್ಥಕ ಸಾಧನೆ ಮಾಡಿ ಗುರುತಿಸಿಕೊಳ್ಳುವಂತಾಗಬೇಕು ಎಂದರು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಎಲ್ಲರನ್ನೂ ಸಹನೆಯಿಂದ ಕಾಣುವ ಗುಣ ನಮ್ಮ ವ್ಯಕ್ತಿತ್ವವಾಗಬೇಕು ಎಂದರು.

ಮುಖಂಡರಾದ ಗುರುಪಾದಪ್ಪ ರೊಟ್ಟಿ, ಉದ್ಯಮಿ ಸಾತವೀರಪ್ಪ ರೊಟ್ಟಿ, ಅಮೋಘಸಿದ್ದ ಖೊಬ್ರಿ, ಡಾ.ಭರಮಣ್ಣ ಕಾಮನ್, ಡಾ.ಶ್ರೀಶೈಲ ಇಂಚಗೇರಿ ಇತರರಿದ್ದರು.