ಮೂಡಿಗೆರೆ: ತಾಲೂಕಿನ ಗೋಣಿಬೀಡು ಲಯಲ್ಸ್ ಕ್ಲಬ್ನ ಸಾಧನೆ ಗುರುತಿಸಿ ಈ ಸಾಲಿನ ಲಯನ್ಸ್ 317ಡಿ ತನಿಷಾ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿಪ್ರಧಾನ ಮಾಡಲಾಯಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಯು.ಎಂ.ರಾಮಪ್ರಸಾದ್‌ಗೆ ಉತ್ತಮ ಅಧ್ಯಕ್ಷ, ಕಾರ್ಯದರ್ಶಿ ಮಹೇಶ್‌ಗೆ
ಉತ್ತಮ ಕಾರ್ಯದರ್ಶಿ ಹಾಗೂ ಖಜಾಂಚಿ ಎಂ.ಸಿ.ನವೀನ್‌ಕುಮಾರ್‌ಗೆ ಉತ್ತಮ ಖಜಾಂಚಿ ಎಂಬಗೌರವ ಲಭಿಸಿದೆ. ಇದು ಸಂಸ್ಥೆಯ ಶ್ರೇಷ್ಠ ಕಾರ್ಯಕ್ಷಮತೆ ತೋರಿಸಿದೆ. ಯುವ ಶಕ್ತೀಕರಣ, ಕೃಷಿಸಹಾಯ, ಮಾನವೀಯ ಸೇವೆ, ಪರಿಸರ ಸಂರಕ್ಷಣೆ, ಕಾನೂನು ಅರಿವು, ಶರೀರದ ಅಂಗದಾನ, ದೃಷ್ಟಿಕಾಳಜಿ, ಸ್ವಚ್ಛ ಭಾರತ, ಗ್ರಾಹಕ ಜಾಗೃತಿ ಸೇರಿದಂತೆ ಹಲವು ಜನಪರ ಸೇವಾ ಚಟುವಟಿಕೆಗಳಿಗೆಸೇವಾ ವಿಭಾಗದ ಪ್ರಶಸ್ತಿಗಳು ಲಭಿಸಿವೆ.
ಲಯನ್ಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಯು.ಎಂ.ರಾಮಪ್ರಸಾದ್ ಮಾತನಾಡಿ, ಲಯನ್ಸ್ ಕ್ಲಬ್ ಸದಸ್ಯರ
ಶ್ರಮದ ಫಲವಾಗಿ ಅನೇಕ ಪ್ರಶಸ್ತಿಗಳು ಸಿಗುವಂತಾಗಿದೆ. ಸಂಘ-ಸಂಸ್ಥೆಗಳು ಸಮಾಜಮುಖಿ
ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಜನರ ಏಳಿಗೆಗೆ ಶ್ರಮಿಸಿದರೆಪ್ರಶಸ್ತಿಗಳು ತಾನಾಗಿ ಹುಡುಕಿ ಕೊಂಡು ಬರುತ್ತದೆ. ನಮ್ಮ ಸದಸ್ಯರು ಪ್ರಶಸ್ತಿ ಹಿಂದೆ ಹೋದವರಲ್ಲ.ಆದರೂ ಪ್ರಶಸ್ತಿ ಸಿಕ್ಕಿರುವುದು ಗೋಣಿಬೀಡು ಹೋಬಳಿಯ ಜನರಿಗೆ ಸಲ್ಲಿಕೆಯಾದ ಗೌರವ ಎಂದುತಿಳಿಸಿದರು.
ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ, ಪ್ರಾದೇಶಿಕ ಅಧ್ಯಕ್ಷ ಎಂ.ಬಿ.ಗೋಪಾಲ್ ಗೌಡ, ವಲಯಾಧ್ಯಕ್ಷಬಿ.ಎನ್.ವೆಂಕಟೇಶ್, ಎಸ್.ಸಿ.ಮಹೇಶ್, ಎಂ.ಸಿ. ನವೀನ್ ಕುಮಾರ್ ಇತರರಿದ್ದರು.