ಕಂಪ್ಲಿ ತಹಸೀಲ್ದಾರ್ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ವರರಾವ್, ಪದಾಧಿಕಾರಿಗಳಾದ ಬಳ್ಳಾರಿ ಮಾಧವ, ನಾಗರಾಜ ಬುರೆ, ಕೃಷಿ ಅಧಿಕಾರಿ ಶ್ರೀಧರ್, ಶಿರಸ್ತೆದಾರರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ ಇತರರಿದ್ದರು. 
ಜಿಲ್ಲೆ

ಗೊಲ್ಲರ ನಿಗಮ ಸರ್ಕಾರ ಸ್ಥಾಪಿಸಲಿ

ರುದ್ರಪ್ಪ ವಾಲಿ

ಕಂಪ್ಲಿ: ಶ್ರೀಕೃಷ್ಣ ಗೀತೋಪದೇಶವು ಜಗದ ಜಂಜಾಟಗಳಿಂದ ವಿಮುಖಗೊಳಿಸುತ್ತದೆ ಎಂದು ಕಂಪ್ಲಿ ತಾಲೂಕು ಗೊಲ್ಲರ ಸಂಘದ ಅಧ್ಯಕ್ಷ ಎಂ.ವೆಂಕಟೇಶ್ವರರಾವ್ ಹೇಳಿದರು.


ಸ್ಥಳೀಯ ತಹಸೀಲ್ದಾರ್ ಸಭಾಂಗಣದಲ್ಲಿ ಆಯೋಜಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರಂಭದಲ್ಲಿ ಮಾತನಾಡಿದರು. ಪ್ರತಿ ಸಮಸ್ಯೆಯಿಂದ ಪಾರಾಗಲು ಗೀತೋಪದೇಶದ ಸಾರ ಅರಿಯುವಲ್ಲಿ ಜಾಗೃತಿ ಅಗತ್ಯ. ಯಾದವ(ಗೊಲ್ಲರ)ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು.

ಗೊಲ್ಲರ ನಿಗಮವನ್ನು ಸ್ಥಾಪಿಸಿ

ಪ್ರಭುಕ್ಯಾಂಪ್‌ನ ಬಳಿ ನಂ.10ಮುದ್ದಾಪುರ ಕ್ರಾಸ್‌ರಸ್ತೆಯಲ್ಲಿ ಶ್ರೀಕೃಷ್ಣ ವೃತ್ತವನ್ನು ರಚಿಸುವಲ್ಲಿ ತಾಲೂಕು ಆಡಳಿತ ಮುಂದಾಗಬೇಕು. ಗೊಲ್ಲರ ನಿಗಮವನ್ನು ಸ್ಥಾಪಿಸಿ ಅಲೆಮಾರಿ, ಅರೆಅಲೆಮಾರಿ ಗೊಲ್ಲರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು.

ಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸುವಲ್ಲಿ ರಾಜ್ಯ ಸರ್ಕಾರ ಬದ್ಧತೆ ತೋರಬೇಕು ಎಂದರು. ಪುರಸಭೆ ಸಭಾಂಗಣದಲ್ಲಿ ಆಯೋಜಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಲೆಕ್ಕಿಗ ರಮೇಶ ಬೆಳಂಕರ್, ವ್ಯವಸ್ಥಾಪಕ ಮಂಜುನಾಥ, ಜೆಇಗಳಾದ ಗೋಪಾಲ್, ಮೇಘನಾ, ಸಮುದಾಯ ಸಂಘಟನಾಧಿಕಾರಿ ಎಂ.ವಸಂತಮ್ಮ ಇತರರಿದ್ದರು.