ಮಡಿಕೇರಿ:
ಅಮೆರಿಕಾದಲ್ಲಿ ಈಚೆಗೆ ನಡೆದ ಯುಎಸ್‌ಎ ಕಿಡ್ಸ್ ಗಾಲ್ಫ್ ಚಾಂಪಿಯನ್‌ಶಿಪ್‌ನ 11 ವರ್ಷದ ವಿಭಾಗದಲ್ಲಿ ಕೊಡಗು ಮೂಲದ ಬಲ್ಲಚಂಡ ಐಡ ತಿಮ್ಮಯ್ಯ 3ನೇ ಸ್ಥಾನ ಗಳಿಸಿದ್ದಾರೆ.
ಇವರು ಖ್ಯಾತ ರ‍್ಯಾಲಿ ಪಟು ಬಲ್ಲಚಂಡ ಡೆನ್ ತಿಮ್ಮಯ್ಯ-ಸಂಜನಾ ತಿಮ್ಮಯ್ಯ ದಂಪತಿ ಪುತ್ರಿ. ವಿವಿಧ ದೇಶಗಳ ಸ್ಪರ್ಧಿಗಳು ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.
ಐಡ ತಿಮ್ಮಯ್ಯ ಭಾರತವನ್ನು ಪ್ರತಿನಿಧಿಸಿದ್ದರು.