Bengaluru: Agniveer women personnel undergo a training session at Corps of Military Police, in Bengaluru, Tuesday, March 7, 2023. (PTI Photo/Shailendra Bhojak)(PTI03_07_2023_000193B) 
ಜಿಲ್ಲೆ

ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ: ಮಾ.೧೦ ರಂದು ಓಟದ ಸ್ಪರ್ಧೆ

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವದ ಅಂಗವಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದಲ್ಲಿ ಮಾ.೧೦ರಂದು ೫ ಹಾಗೂ ೧೦ ಕಿ.ಮೀ ಓಟದ ಸ್ಪರ್ಧೆ ಆಯೋಜಿಸಲಾಗಿದೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುವರ್ಣ ಮಹೋತ್ಸವದ ಲೋಗೋ ಮತ್ತು ಟೀ ಶರ್ಟ್ ಅನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಬಿಡುಗಡೆಗೊಳಿಸಿ ಮಾತನಾಡಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದಲ್ಲಿ ಫಿಟ್‌ನೆಸ್ ಫಾರ್ ಆಲ್ ಎಂಬ ಶೀರ್ಷಿಕೆಯಡಿ ಈ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಓಟದ ಮುಖಾಂತರ ಮಾದಕ ವಸ್ತು ಮುಕ್ತ ಕರ್ನಾಟಕ, ಸೈಬರ್ ಕ್ರೈಂ ಮತ್ತು ಹಸಿರು ಬೆಂಗಳೂರು ಎಂಬ ನಾಲ್ಕು ಮಾದರಿಯಲ್ಲಿ ಜಾಗೃತಿ ಮೂಡಿಸುವುದಾಗಿ ಹೇಳಿದರು.
ವಿಜೇತರಿಗೆ ಬಹುಮಾನ:
ಮಾ.೧೦ರಂದು ವಿಧಾನಸೌಧದ ಎದುರು ಓಟ ಪ್ರಾರಂಭವಾಗಲಿದ್ದು, ಕಬ್ಬನ್‌ಪಾರ್ಕ್ ಮುಖಾಂತರ ಸಾಗಿ ವಿಧಾನಸೌಧದ ಎದುರೇ ಮುಕ್ತಾಯಗೊಳ್ಳಲಿದೆ. ಪೊಲೀಸ್, ಪಬ್ಲಿಕ್ ಹಾಗೂ ಎಸ್‌ಬಿಐ ಎಂಬ ಮೂರು ವಿಭಾಗಗಳಲ್ಲಿ ೫ ಕಿ.ಮೀ. ಮತ್ತು ೧೦ ಕಿ.ಮೀ. ಓಟ ನಡೆಯಲಿದೆ. ನಿಗದಿತ ಸಮಯಕ್ಕೆ ೧೦ ಕಿ.ಮೀ. ಓಟಕ್ಕೆ ಪ್ರಥಮ ಬಹುಮಾನ ೧ ಲಕ್ಷ ರೂ. ಮತ್ತು ಐದು ಕಿ.ಮೀ. ಓಟದಲ್ಲಿ ಪ್ರಥಮ ಬಹುಮಾನ ೪೦ ಸಾವಿರ ರೂ. ನೀಡಲಾಗುತ್ತದೆ. ಅಂದರೆ, ಮೂರು ವಿಭಾಗಗಳಲ್ಲಿ ಪುರುಷರು ಮತ್ತು ಮಹಿಳಾ ವಿಜೇತರಿಗೆ ಪ್ರತ್ಯೇಕವಾಗಿ ನಗದು ಬಹುಮಾನ ನೀಡಲಾಗುತ್ತದೆ. ಅಂತೆಯೆ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರಿಗೂ ಪ್ರತ್ಯೇಕವಾಗಿ ಬಹುಮಾನ ನೀಡುವುದಾಗಿ ತಿಳಿಸಿದರು.
ಟೀ ಶರ್ಟ್, ಪದಕ ಪಡೆದುಕೊಳ್ಳಿ:
ಓಟ ನಡೆಯುವ ಆಯ್ದ ಸ್ಥಳಗಳಲ್ಲಿ ಪೊಲೀಸ್ ಬ್ಯಾಂಡ್ ತಂಡವು ಪ್ರದರ್ಶನ ನೀಡಲಿದೆ. ಓಟದ ಕೊನೆಯಲ್ಲಿ ಕರ್ನಾಟಕ ಪೊಲೀಸ್ ಮೌಂಟೆಂಡ್ ಕಂಪನಿಯ ಕುದುರೆಗಳು ಭಾಗವಹಿಸಲಿವೆ. ಕರ್ನಾಟಕ ಪೊಲೀಸ್ ಇಲಾಖೆಯ ಅತ್ಯುತ್ತಮ ಓಟಗಾರರು ಸಹ ಈ ಓಟದಲ್ಲಿ ಭಾಗವಹಿಸಲಿದ್ದಾರೆ. ಹಿರಿಯ ನಾಗಕರಿಕರು, ಹವ್ಯಾಸಿ ಹಾಗೂ ವೃತ್ತಿಪರ ಓಟಗಾರರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸ್ಪರ್ಧಿಗಳಿಗೆ ಟೀ-ಶರ್ಟ್ ಹಾಗೂ ಉಪಹಾರದ ವ್ಯವಸ್ಥೆ ಇರಲಿದೆ. ಓಟ ಪೂರ್ಣಗೊಳಿಸುವವರಿಗೆ ಪದಕ ನೀಡುವುದಾಗಿ ತಿಳಿಸಿದರು.
ಡಿಜಿಪಿ ಕರ್ನಾಟಕ ಕಪ್ ನೀಡಲು ನಿರ್ಧಾರ:
ವಿಜೇತರಿಗೆ ರಾಜ್ಯ ಪೊಲೀಸ್ ಇಲಾಖೆಯಿಂದ ಡಿಜಿಪಿ ಕರ್ನಾಟಕ ಕಪ್ ನೀಡಲು ನಿರ್ಧರಿಸಲಾಗಿದೆ. ೧೦ ಕಿ.ಮೀ, ಓಟವನ್ನು ಮೊದಲು ಪೂರ್ಣಗೊಳಿಸುವ ಪುರುಷ ಮತ್ತು ಮಹಿಳಾ ಓಟಗಾರರಿಗೆ ತಲಾ ೫೦ ಸಾವಿರ ರೂ. ನಗದು ಬಹುಮಾನದ ಜತೆಗೆ ಡಿಜಿಪಿ ಕರ್ನಾಟಕ ಕಪ್ ನೀಡಲಾಗುವುದು. ಇದರೊಂದಿಗೆ ವಿಜೇತರಿಗೆ ಒಟ್ಟು ೧.೫೦ ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದರು.
ಜಿಲ್ಲಾ ಮಟ್ಟದಲ್ಲೂ ಓಟ:
ಈ ಓಟದ ಸ್ಪರ್ಧೆ ಬೆಂಗಳೂರು ಸೇರಿದಂತೆ ಜಿಲ್ಲಾ ಮಟ್ಟದಲ್ಲೂ ನಡೆಯಲಿದೆ. ಆಯಾಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಓಟದ ಸ್ಪರ್ಧೆ ನಡೆಯಲಿದೆ. ಇಲ್ಲಿ ವಿಜೇತರಾದವರಿಗೂ ಆಕರ್ಷಕ ಬಹುಮಾನ ನೀಡುವುದಾಗಿ ಡಿಜಿಪಿ ಅಲೋಕ್ ಮೋಹನ್ ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಎಡಿಜಿಪಿ ಅಲೋಕ್ ಕುಮಾರ್, ಸೌಮೇಂದು ಮುಖರ್ಜಿ, ಕೆಎಸ್‌ಆರ್‌ಪಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಎಸ್‌ಬಿಐ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಶರ್ಮಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ನೋಂದಣಿ ಮಾಡಿಕೊಳ್ಳುವುದು ಹೇಗೆ?
ಈ ಓಟದಲ್ಲಿ ಭಾಗವಹಿಸುವ ಆಸಕ್ತರು ಡಿಡಿಡಿ.್ಚ್ಝಜ್ಚಿ್ಟ೨ಚ್ಚಛಿ.್ಚಟಞ ಜಾಲತಾಣದ ಮುಖಾಂತರ ನೋಂದಣಿ ಮಾಡಿಕೊಳ್ಳಬಹುದು.