Golden crown to be dedicated to Goddess Danamma Devi on the 25th 
ಜಿಲ್ಲೆ

25ರಂದು ದಾನಮ್ಮದೇವಿಗೆ ಚಿನ್ನದ ಕಿರೀಟ ಸಮರ್ಪಣೆ

ರಬಕವಿ-ಬನಹಟ್ಟಿ: ರಬಕವಿ ಕ್ಷೇತ್ರದ ರಕ್ಷಕಿ ಶ್ರೀದಾನಮ್ಮದೇವಿ ಮೂರ್ತಿಗೆ ಮೇ 25ರಂದು ಮಧ್ಯಾಹ್ನ 3 ಗಂಟೆಗೆ ಚಿನ್ನದ ಕಿರೀಟವನ್ನು ಶ್ರೀಶೈಲದ ಜಗದ್ಗುರು ಶ್ರೀ ಡಾ. ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ಅಮೃತದ ಹಸ್ತದಿಂದ ಸಮರ್ಪಿಸಲಾಗುತ್ತದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ ತಿಳಿಸಿದರು.

ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದೇವಿ ಭಕ್ತರ ಬಹುದಿನಗಳ ಆಸೆಯಂತೆ 8 ವರ್ಷಗಳ ನಂತರ ಈಡೇರಿದ್ದು, ನಮಗೂ ಸಂತಸ ತಂದಿದೆ. ಈ ಕಾರ್ಯ ಸರ್ವ ಸಮಾಜಗಳ ಧುರೀಣರು, ಭಕ್ತಾದಿಗಳು ಸುಂದರ ಕ್ಷಣದಲ್ಲಿ ಪಾಲ್ಗೊಂಡು ಜಗದ್ಗುರುಗಳ ದರ್ಶನಾಶೀರ್ವಾದ ಪಡೆಯಲು ಶಿವಜಾತ ಉಮದಿ ಕೋರಿದ್ದಾರೆ.