ಜಿಲ್ಲೆ

ಮೇ.೨೧ರಂದು ಚಿನ್ನದ ಕಿರೀಟ ಸಮರ್ಪಣೆ

ಆದರ್ಶ್. ಎಂ.ಕೆ.

ಮಡಿಕೇರಿ: ಮಡಿಕೇರಿಯ ಶ್ರೀಕೋಟೆ ಮಹಾಗಣಪತಿ ದೇವಾಲಯದಲ್ಲಿ ಮೇ೨೧ ಮತ್ತು ೨೨ ರಂದು ಚಿನ್ನದ ಕಿರೀಟ ಸಮರ್ಪಣೆ ವಾರ್ಷಿಕೋತ್ಸವ ನಡೆಯಲಿದೆ ಎಂದು ಶ್ರೀಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಅಧ್ಯಕ್ಷ ಬಿ.ವಿ.ಅರವಿಂದ್, ಮೇ೨೧ ರಂದು ಸಂಜೆ ೬ ಗಂಟೆಗೆ ಶ್ರೀ ಕೋಟೆ ಮಹಾಗಣಪತಿ ದೇವಾಲಯದಲ್ಲಿ ಭಜನೆ, ವಿಶೇಷ ಪೂಜೆ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವಿತರಣೆಯಾಗಲಿದೆ ಎಂದು ಹೇಳಿದ್ದಾರೆ.

ಮೇ.೨೨ ರಂದು ಮುಂಜಾನೆ ಶ್ರೀಕೋಟೆ ಮಹಾಗಣಪತಿ ದೇವರಿಗೆ ಅಬಿಷೇಕ, ೨೧ ತೆಂಗಿನಕಾಯಿಗಳ ಗಣ ಹೋಮ, ೧೦ ಸಹಸ್ರ ದುವಾರ್ಂಕುರ, ಒಂದು ಸಹಸ್ರ ಎಕ್ಕ ಸಮರ್ಪಣೆ ಮತ್ತು ಪೂರ್ಣಾಹುತಿ ಜರುಗಲಿದ್ದು, ಮಹಾಮಂಗಳಾರತಿಯ ನಂತರ ಭಕ್ತರಿಗೆ ಅನ್ನ ಸಂತರ್ಪಣೆಯಾಗಲಿದೆ. ಹೆಚ್ಚಿನ ಮಾಹಿತಿಗಾಗಿ ೯೯೮೬೪೯೮೪೬೬ ನ್ನು ಸಂಪರ್ಕಿಸಬಹುದೆಂದು ಬಿ.ವಿ.ಅರವಿಂದ್ ತಿಳಿಸಿದ್ದಾರೆ.