ಜಿಲ್ಲೆ

ಚಿನ್ನದ ಹುಡುಗ ದಾದಾಪೀರಗೆ ತವರೂರಲ್ಲಿ ಸತ್ಕಾರ

ಕಲ್ಲೂರ (ಧಾರವಾಡ ತಾ.): ತಮಿಳುನಾಡಿನಲ್ಲಿ ಇತ್ತೀಚೆಗೆ ಜರುಗಿದ ಸೌತ್ ಜೋನ್ ನ್ಯಾಷನಲ್ ಚಾಂಪಿಯನ್‌ಶಿಪ್ ಕುಸ್ತಿ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಕಲ್ಲೂರ ಗ್ರಾಮದ ವಿದ್ಯಾರ್ಥಿ ದಾದಾಪೀರ ಸ್ಯೆಯದ್‌ನವರ ಬಂಗಾರದ ಪದಕ ಪಡೆದು ವಿಶೀಷ್ಟ ಸಾಧನೆ ಮಾಡಿದ್ದಾನೆ.

ಪಂದ್ಯಾವಳಿಯ ನಂತರ ತವರಿಗೆ ಆಗಮಿಸಿದ ದಾದಾಪೀರನನ್ನು ಗ್ರಾಮಸ್ಥರು ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗಿತಿಸಿ ಸನ್ಮಾನಿಸಲಾಯಿತು.

ಗ್ರಾಪಂ ಮಾಜಿ ಸದಸ್ಯ ಸಿದ್ರಾಮ ದಂಡಿನ ಮಾತನಾಡಿ, ‘ನಮ್ಮ ಗ್ರಾಮ ಮೊದಲಿನಿಂದಲೂ ಕುಸ್ತಿಗೆ ಹೆಸರುವಾಸಿಯಾಗಿದೆ. ನಮ್ಮೂರಿನ ಬಾಲಕ ಬಂಗಾರದ ಪದಕ ಪಡೆದು ಊರಿಗೆ ಕೀರ್ತಿ ತಂದಿದ್ದಾನೆ. ಆತನ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಿದೆ ಎಂದರು.

ತಾಪಂ ಮಾಜಿ ಸದಸ್ಯ ಮಹಾದೇವ ದಂಡಿನ ಮಾತನಾಡಿ, ಕಲ್ಲೂರ ಗ್ರಾಮ ಕುಸ್ತಿಯ ತವರೂರು ಆಗಿದೆ. ಇಲ್ಲಿ ಪ್ರತಿ ವರ್ಷ ಯುಗಾದಿಯಂದು ಕುಸ್ತಿ ಹಬ್ಬ ಆಚರಿಸಲಾಗುತ್ತದೆ ಎಂದರು.

ದಾದಾಪೀರಗೆ ತರಬೇತಿ ನೀಡಿದ ಶಿವಪ್ಪ ಪಾಟೀಲ, ಇಸ್ಮಾಯಿಲ್ ಸೈಯದನವರ, ಶಿವಾನಂದ ದಂಡಿನ, ಮಂಜುನಾಥ ಕುರುಬಗಟ್ಟಿ, ರಿಯಾಜ್ ನನ್ನೆಸಾಬನವರ, ರಹಿಮಾನ ಹೋಳಿ, ಹಿರಿಯ ಕುಸ್ತಿ ಪಟು ರಫೀಕ್ ಹೋಳಿ, ಸುರೇಶ ಗುಡಕಟ್ಟಿ, ಮೈಲಾರ ಕುರುಬಗಟ್ಟಿ, ನಿಂಗರಾಜ ಹಡಪದ, ಮಡಿವಾಳಪ್ಪ ಬುಡ್ರಕಟ್ಟಿ, ಶಮೀರ ಸೈಯದನವರ, ಬಸವರಾಜ ದಂಡಿನ, ಚೆನ್ನಬಸಪ್ಪ ಏಳಲ್ಲಿ, ಶಂಕರ ದಂಡಿನ, ಸಣ್ಣ ಗೌಸ್ ಸೈಯದನವರ ಇತರರಿದ್ದರು.