ಜಿಲ್ಲೆ

ಮನೆ ನುಗ್ಗಿದ ಕಳ್ಳರು 70 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವು


ಮಂಗಳೂರು: ಉರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಿರುವ ಬ್ಯಾಂಕ್ ಉದ್ಯೋಗಿ ಕನಕ ಸುರೇಶ್ ರೆಡ್ಡಿ ಅವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ.


ಕನಕ ಸುರೇಶ್ ರೆಡ್ಡಿ ಅವರು ಶುಕ್ರವಾರ ಬೆಳಗ್ಗೆ ಬ್ಯಾಂಕ್‌ಗೆ ಹೋಗಿದ್ದು ಸಂಜೆ 6 ಗಂಟೆಗೆ ಮನೆಗೆ ವಾಪಸಾದಾಗ ಯಾರೋ ಕಳ್ಳರು ಮನೆಯ ಬಾಗಿಲನ್ನು ತೆರೆದು ಕಪಾಟಿನ ಸೇಫ್ ಲಾಕರ್‌ನಲ್ಲಿಟ್ಟಿದ್ದ ಒಟ್ಟು ಸುಮಾರು 70,000 ರೂ. ಮೌಲ್ಯದ ಚಿನ್ನದ ಎರಡು ಉಂಗುರಗಳು ಹಾಗೂ 4,000 ರೂ.ಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.