ಮಂಗಳೂರು: ತೆರಿಗೆ ವಂಚಿಸಿ ದುಬೈಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 6,42,320 ರೂ. ಮೌಲ್ಯದ 129.500 ಗ್ರಾಂ ತೂಕದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತ್ತೆ ಮಾಡಿದ್ದಾರೆ.
ಮಕ್ಕಳ ಅಂಗಿ ಗುಂಡಿಗಳಲ್ಲಿ ಚಿನ್ನವನ್ನು ಸಾಗಾಟ ಮಾಡಿದ್ದರು. ನೋಡಲು ಸ್ಟೀಲ್ ಬಟನ್‌ನಂತಿರುವ ಅಂಗಿಯ ಗುಂಡಿಗಳ ಒಳಭಾಗದಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು. ಹಲವು ಅಂಗಿಗಳಲ್ಲಿ ಈ ರೀತಿ ಬಟನ್‌ಗಳಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.