ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ 24.44 ಲಕ್ಷ ರೂ ಮೌಲ್ಯದ ಚಿನ್ನ ಪತ್ತೆ

Dakshina Kannada

ಮಂಗಳೂರು: ದುಬೈಯಿಂದ ಆಗಮಿಸಿದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸುಮಾರು 24.44 ಲಕ್ಷ ರೂ. ಮೌಲ್ಯದ ಅರ್ಧ ಕೆ.ಜಿ. ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

ಕಾಸರಗೋಡು ಮೂಲದ ಅಬೂಬಕರ್ ಸಿದ್ಧಿಕ್ ಪುಲಿಕೂರ್ ಮೊಹಮ್ಮದ್ ಪ್ರಕರಣದ ಆರೋಪಿ. ಈತ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಭಾನುವಾರ ಬೆಳಗ್ಗೆ ಆಗಮಿಸಿದ್ದ. ಈ ಸಂದರ್ಭ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ತಪಾಸಣೆಗೊಳಪಡಿಸಿದ್ದು, ಸಾಕ್ಸ್‌ನಲ್ಲಿ 24,44ಲಕ್ಷ ರೂ. ಮೌಲ್ಯದ ಚಿನ್ನವಿಟ್ಟಿರುವುದು ಪತ್ತೆಯಾಗಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.