ಜಿಲ್ಲೆ

25.45 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ ಪತ್ತೆ

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 25,45,920 ರೂ. ಮೌಲ್ಯದ 499 ಗ್ರಾಂ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ಓರ್ವನನ್ನು ಬಂಧಿಸಿದ್ದಾರೆ. ಕಾಸರಗೋಡು ನಿವಾಸಿ ಸುಮೇಶ್ ಬಂಧಿತ ಆರೋಪಿ. ಈತ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಅ.4ರಂದು ಮಂಗಳೂರಿಗೆ ಆಗಮಿಸಿದ್ದು, ಇಲೆಕ್ಟ್ರಿಕಲ್ ಕುಕ್ಕರ್ ಒಳಗೆ ಕರಗಿಸಿದ ಚಿನ್ನವನ್ನು ಗುಪ್ತವಾಗಿ ಜೋಡಿಸಿ ಸಾಗಾಟ ಮಾಡಿದ್ದ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.