ಜಿಲ್ಲೆ

ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದವನ ಬಂಧನ

Dakshina Kannada

ಮಂಗಳೂರು: ಹೇರ್ ಕ್ಲಿಪ್ಪರ್, ಪೋರ್ಟೆಬಲ್ ಜ್ಯೂಸರ್, ಆಟಿಕೆಗಳಲ್ಲಿ ಚಿನ್ನ ಸಾಗಿಸುತ್ತಿದ್ದವನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ದುಬೈ- ಮಂಗಳೂರು ಸ್ಪೈಸ್‌ಜೆಟ್ ವಿಮಾನದಲ್ಲಿ ಆಗಮಿಸಿದ ಬಂಟ್ವಾಳದ ಬೋಳಂತೂರು ನಿವಾಸಿ ಆರೀಶ್ ಎಂಬಾತ 14.55 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ.