Gold Shop Robed In Kalaburagi Day LightGold Shop Robed In Kalaburagi Day Light 
ಜಿಲ್ಲೆ

ಅಂಗಡಿಗೆ ನುಗ್ಗಿ ಗನ್ ತೋರಿಸಿ ಕಲಬುರಗಿಯಲ್ಲಿ ಹಾಡಹಗಲೇ 3 ಕೆಜಿ ಚಿನ್ನಾಭರಣ ಲೂಟಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಚಿನ್ನಾಭರಣ ವ್ಯಾಪಾರಿಗೆ ಗನ್ ಇನ್ನಿತರ ಮಾರಕಾಸ್ತçಗಳನ್ನು ತೋರಿಸಿ ಸುಮಾರು ೩ ಕೆಜಿ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ಸಾಮಾನುಗಳನ್ನು ದರೋಡೆ ಮಾಡಿದ ಘಟನೆ ಇಂದು ಹಾಡಹಗಲೇ ನಡೆದಿದೆ. ಜನರು ಬೆಚ್ಚಿ ಬಿದ್ದರೆ,ವ್ಯಾಪಾರಿಗಳು ತಲ್ಲಣಗೊಳ್ಳುವಂತಾಗಿದೆ.ಸುಳಿವು ಸಿಗದಂತೆ ಮಾಡಲು ಲೂಟಿಕೋರರು ಅಲ್ಲಿದ್ದ ಸಿಸಿ ಕ್ಯಾಮರಾವನ್ನು ಸಹ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೊದಲೇ ಪ್ಲಾನ್ ಮಾಡಿಕೊಂಡಿದ್ದ ದರೋಡೆಕೋರರು ಶುಕ್ರವಾರ ಮಧ್ಯಾಹ್ನ ಇಬ್ಬಿಬ್ಬರು ಜನನಿಬಿಡ ಪ್ರದೇಶವಾಗಿರುವ ನಗರದ ಹೃದಯ ಭಾಗದ ಸೂಪರ್ ಮಾರ್ಕೇಟ್ ಪ್ರದೇಶದ ಸರಾಪ್ ಬಜಾರ್ ಮತ್ತು ಚಪ್ಪಲ್ ಬಜಾರ್‌ನಲ್ಲಿರುವ ಜೈ ಭವಾನಿ ದೇವಿದಾಸ್ ಕಾಂಪ್ಲೆಕ್ಸ್ನಲ್ಲಿರುವ ಚಿನ್ನಾಭರಣ ವ್ಯಾಪಾರಿಯಾಗಿರುವ ಪಶ್ವಿಮ ಬಂಗಾಳ ಮೂಲದ ಮೋತಿ ಬಂಗಾಲಿ ಅಲಿಯಾಸ್ ಸಬಕ್ ಉತುಲ್ಲಾ ಅಶ್ಪಕ್‌ಉತುಲಾ ಎಂಬುವರ ಅಂಗಡಿಯಲ್ಲಿ ಹಗಲು ದರೋಡೆ ನಡೆದಿದೆ.

ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿರುವ ಅಂಗಡಿಗೆ ನುಗ್ಗಿ ಮಾಲೀಕ ಸಬ್ಕ್ತುಲ್ಲಾ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿದ್ದಾರೆ ತಮ್ಮ ಕೆಲಸ ಮಾಡಿಕೊಂಡು ಕಾಲ್ಕಿತ್ತಿದ್ದಾರೆ. ಉಳಿದ ಅಂಗಡಿಗಳು ತೆರೆದಿರಲಿಲ್ಲ.

ಚಿನ್ನಾಭರಣ ಕುರಿತು ಮಾಹಿತಿ ಹೇಳಿದಂತೆ ಮಾಡಿ ಇಬ್ಬಿಬ್ಬರಂತೆ ನಾಲ್ಕೆÊದು ಜನರು ಜಮಾಗೊಂಡಿದ್ದಾರೆ. ಬಳಿಕ ಅಲ್ಲಿದ್ದವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಅಂಗಡಿಯಲ್ಲಿದ್ದ ಸುಮಾರು ೩ ಕೆಜಿಗೂ ಅಧಿಕ ಚಿನ್ನಾಭರಣಗಳನ್ನು ಹಾಗೂ ಬೆಳ್ಳಿಯ ಸಾಮಾನುಗಳನ್ನು ಮತ್ತು ಅಲ್ಲಿದ್ದ ಸ್ವಲ್ಪ ನಗದು ಹಣವನ್ನು ಲೂಟಿ ಮಾಡಿಕೊಂಡು ಪರಾರಿಯಾಗಿದ್ದಾರೆ.

ದಶಕದ ಹಿಂದೆ ನೆಹರು ಗಂಜ್ ಪ್ರದೇಶದಲ್ಲಿ ಮತ್ತು ಐದು ವರ್ಷಗಳ ಹಿಂದೆ ಸೇಡಂ ರಸ್ತೆಯಲ್ಲಿರುವ ಖಾಸಗಿ ಚಿನ್ನಾಭರಣ ಒತ್ತೆ ಇಟ್ಟುಕೊಂಡು ಸಾಲ ಕೊಡುವ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಹ ಹಾಡಹಗಲೇ ದರೋಡೆ ನಡೆದಿತ್ತು. ಈಗ ಕೆಲ ವರ್ಷಗಳ ನಂತರ ನಡೆದಿದ್ದು ಕಳ್ಳರ ಗ್ಯಾಂಗ್ ಸಂಚು ರೂಪಿಸಿ ರಾಬರಿ ಮಾಡಿದ್ದಾರೆ. ಹಗಲು ಹೊತ್ತಿನಲ್ಲಿಯೇ ಲೂಟಿ ನಡೆದಿದ್ದು ಪೊಲೀಸರ ಕಾರ್ಯವೈಖರಿಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ಅರಿಯುತ್ತಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜನರು ಗಾಬರಿಗೊಂಡು ಕಾಂಪ್ಲೆಕ್ಸ್ ಮುಂದೆ ಜಮಾಗೊಂಡಿದ್ದಾರೆ.

==

.