ಜಿಲ್ಲೆ

ಕೋಟ ಪೊಲೀಸರಿಂದ ಚಿನ್ನಕಳ್ಳನ ಬಂಧನ

Udupi

ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಾಡಿ ಗ್ರಾಮದಲ್ಲಿ ಆ.8ರಂದು ನಡೆದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ವಿಜಯಪುರ, ಇಂಡಿ ತಾಲೂಕಿನ ನಿವಾಸಿ ಅಮಿತ ಶಾಂತಪ್ಪ ನಾಗನಾಸುರ್(21). ಪ್ರಾಣೇಶ್ ಎಂಬುವರ ಮನೆಯ ಹೆಂಚನ್ನು ತೆಗೆದು ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ಕಳವುಗೈದ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೋಟ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಪುಷ್ಪ, ಸಂತೋಷ್ ಬಿ.ಪಿ ನೇತೃತ್ವದಲ್ಲಿ ತನಿಖೆ ನಡೆದು, ಠಾಣೆಯ ಅಪರಾಧ ಪತ್ತೆದಳದ ಸಿಬ್ಬಂದಿ ಸುರೇಶ ಎಚ್, ಪ್ರಕಾಶ್ ಎಸ್.ರಾಜೇಶ್ ಆರೋಪಿಯನ್ನು ಕುಂದಾಪುರದಲ್ಲಿ ಬಂಧಿಸಿದ್ದಾರೆ. ಆರೋಪಿ ಬಳಿಯಿದ್ದ 23 ಸಾವಿರ ರೂ.

ಮೌಲ್ಯದ ಚಿನ್ನಾಭರಣ ಹಾಗೂ 4000 ರೂಪಾಯಿ ಮೌಲ್ಯದ 3 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.