ಕೆ.ಆರ್.ನಗರದ ಬಸವೇಶ್ವರ ಬಡಾವಣೆಯಲ್ಲಿರುವ ಮಲೈ ಮಹದೇಶ್ವರ ದೇವಸ್ಥಾನದಲ್ಲಿರುವ ಶ್ರೀ ಮಹದೇಶ್ವರಸ್ವಾಮಿಗೆ ಚಿನ್ನ ಲೇಪಿತ ಮುಖಾವಾಡ ಧರಿಸಲಾಯಿತು. 
ಜಿಲ್ಲೆ

ಮಹದೇಶ್ವರಸ್ವಾಮಿಗೆ ಚಿನ್ನ ಲೇಪಿತ ಮುಖಾವಾಡ

ನಾಗೇಶ ಎಸ್

ಕೆ.ಆರ್.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಶ್ರೀ ಮಲೈ ಮಹದೇಶ್ವರ ದೇವಸ್ಥಾನದಲ್ಲಿರುವ ಮಹದೇಶ್ವರಸ್ವಾಮಿಗೆ ಚಿನ್ನ ಲೇಪಿತ ಮುಖಾವಾಡವನ್ನು ಧರಿಸುವ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಮಲೈ ಮಹದೇಶ್ವರ ದೇವಸ್ಥಾನ ಮತ್ತು ಉತ್ಸವ ಸಮಿತಿ ಟ್ರಸ್ಟ್ ವತಿಯಿಂದ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಗೆ ರುದ್ರಾಭೀಷೇಕ, ಹೋಮ, 9 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಿ, ಸಕಲ ವಿಧಿ ವಿಧಾನಗಳೊಂದಿಗೆ ಹಲವು ವರ್ಷಗಳಿಂದ ಇದ್ದ ಬೆಳ್ಳಿ ಲೇಪಿತ ಮಹದೇಶ್ವರ ಸ್ವಾಮಿಯ ಮುಖವಾಡವನ್ನು ತೆಗೆದು, ಚಿನ್ನ ಲೇಪಿತ ಮುಖವಾಡವನ್ನು ಧರಿಸಲಾಯಿತು.

ಮೈಸೂರಿನ ಪ್ರಧಾನ ಅರ್ಚಕ ಬಸವಾರಾಧ್ಯ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಕ್ತರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು. ಭಕ್ತರಿಗೆ ಸಮಿತಿ ವತಿಯಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಶ್ರೀ ಮಲೈ ಮಹದೇಶ್ವರ ದೇವಸ್ಥಾನ ಮತ್ತು ಉತ್ಸವ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ಎಸ್.ಭೋಜರಾಜ್, ಖಜಾಂಚಿ ಎ.ಎಸ್.ಗಣೇಶ್, ಸದಸ್ಯರಾದ ಸಿದ್ದೇಶ್, ಕೆ.ಎಸ್.ಮಂಜುನಾಥ್, ಕೆ.ಪಿ.ಪ್ರಕಾಶ್, ಬಿ.ಇ.ಅಜಯ್, ಕೆ.ಎಸ್.ಭದ್ರೇಶ್, ಕೆ.ಎಂ.ಗುರುಶಂಕರ್, ಚರಣ್ ಪಿ.ಗುರುಕಾರ್, ಕೆ.ಎಸ್.ಸೋಮೇಶ್ ಇತರರು ಹಾಜರಿದ್ದರು.