ಕಾಳಗಿಗೆ ಹೋಗುವಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಡಬ್ಬಾ ಮಾಯ
ಕಲಬುರಗಿ : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿ ಬಾಕ್ಸ್ನಲ್ಲಿ ಹಾಕಿಟ್ಟಿದ್ದ ಅಂದಾಜು ೪.೫ ಲಕ್ಷ ಮೌಲ್ಯದ ೬೦ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.
ಲಕ್ಷಿö್ಮÃ ಸುಭಾಷ ಗುತ್ತೇದಾರ ಎಂಬುವರೇ ಚಿನ್ನಾಭರಣಗಳನ್ನು ಕಳೆದುಕೊಂಡವರು. ಕಾಳಗಿ ಪಟ್ಟಣದ ಅವರು ಕಲಬುರಗಿಯ ಸಿz್ದೆÃಶ್ವರ ಕಾಲನಿಯಲ್ಲಿರುವ ತವರು ಮನೆಗೆ ಬಂದಿದ್ದರು. ಮರಳಿ ಊರಿಗೆ ಹೋಗಲು ಖರ್ಗೆ ಸರ್ಕಲ್‌ನಲ್ಲಿ ಬಸ್ ಹತ್ತಿದ್ದರು. ಸಣ್ಣೂರ ದಾಟಿದ ನಂತರ ಮಹಿಳೆಯೊಬ್ಬರು ಬಸ್ ನಿಲ್ಲಿಸಿ ಇಳಿದು ಹೋದರು. ನಂತರ ಬ್ಯಾಗ್ ನೋಡಿದಾಗ ಚಿನ್ನಾಭರಣಗಳು ಕಾಣಲಿಲ್ಲ. ವಿಷಯವನ್ನು ಚಾಲಕ-ಕಂಡಕ್ಟರ್‌ಗೆ ತಿಳಿಸಿದರು.
ಕಾಳಗಿ ಪೊಲೀಸ್ ಠಾಣೆಗೆ ನೇರವಾಗಿ ಬಸ್ ತೆಗೆದುಕೊಂಡು ಹೋಗಿ ಪೊಲೀಸರ ಸಹಾಯದಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ತಪಾಸಣೆ ಮಾಡಿದಾಗ ಪತ್ತೆಯಾಗಲಿಲ್ಲ. ಯಾರೋ ಕಳವು ಮಾಡಿಕೊಂಡು ಹೋಗಿದ್ದಾರೆ. ಮಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.