ಜಿಲ್ಲೆ

39 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ ಕಾಸರಗೋಡು ಮೂಲದ ದಂಪತಿ ಅರೆಸ್ಟ್

Dakshina Kannada

ಮಂಗಳೂರು: ಒಳ ಉಡುಪಿನಲ್ಲಿಟ್ಟು ಚಿನ್ನ ಅಕ್ರಮ ಸಾಗಾಟ ಮಾಡುತ್ತಿದ್ದ ದಂಪತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಿದ್ದಾರೆ. 39.48 ಲಕ್ಷ ರೂ. ಮೌಲ್ಯದ 851 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನ ಚೆರೂರ್ ಮೂಲದವರಾದ ಫೌಸಿಯಾ ಮಿಸ್ಸಿರಿಯಾ(33) ಪತಿ ಮೊಯ್ದೀನ್ ಕುಂಞಿ ಚೆರೂರ್(44) ಹಾಗೂ 4 ಮಕ್ಕಳೊಂದಿಗೆ ದುಬೈನಿಂದ ಬಂದರು. ಮಹಿಳೆ ವಿಶೇಷವಾಗಿ ವಿನ್ಯಾಸಗೊಳಿಸಿದ ಒಳ ಉಡುಪಿನಲ್ಲಿ ಚಿನ್ನವನ್ನು ಕಳ್ಳಸಾಗಾಟ ಮಾಡಲು ಪ್ರಯತ್ನಿಸಿದ್ದರು. ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಕಸ್ಟಮ್ಸ್ ಡೆಪ್ಯುಟಿ ಕಮಿಶನರ್ ಕಿರಣ್ ರಂಗಾಲಿ, ಸೂಪರಿಂಟೆಂಡೆಂಟ್‌ಗಳಾದ ಮನೋಕಾತ್ಯಾಯಿನಿ, ಶ್ರೀಕಾಂತ್, ನಾಗೇಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.