ಜಿಲ್ಲೆ

ಅನ್‌ಇವನ್ ಕೆಟಗರಿಯಲ್ಲಿ ಬಂಗಾರದ ಪದಕ

ಜಗದೀಶ ಹೊಂಬಳಿ

ಧಾರವಾಡ: ಧಾರವಾಡ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ರುತು ಸಜ್ಜನ ಸೆ.14 ರಿಂದ 21ರವರೆಗೆ ಶಿರಡಿಯಲ್ಲಿ ನಡೆದ ಸಿಬಿಎಸ್‌ಇ ರಾಷ್ಟ್ರೀಯ ಮಟ್ಟದ ಜಿಮನ್ಯಾಸ್ಟಿಕ್ ಪಂದ್ಯಾವಳಿಯಲ್ಲಿ ಆಲ್‌ರೌಂಡ್ 2ನೇ ಸ್ಥಾನ, ವಯಕ್ತಿಕ ಅನ್‌ಇವನ್ ಕೆಟಗರಿಯಲ್ಲಿ ಬಂಗಾರದ ಪದಕ, ಟೇಬಲ್ ವಾಲ್ಟ್ ನಲ್ಲಿ ರಜತ ಪದಕ ಪಡೆದಿದ್ದಾಳೆ. ಅ.5ರಂದು ಕರ್ನಾಟಕ ಜಿಮ್ನಾಸ್ಟಿಕ್ ಅಸೋಸಿಯೇಶನ್ ನಡೆಸಿದ ರಾಜ್ಯ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದು, ವಿದ್ಯಾರ್ಥಿನಿ ಸಾಧನೆಗೆ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತ ಪ್ರಸಾದ, ಶಾಲೆ ಪ್ರಾಚಾರ್ಯೆ ಸಾಧನಾ ಎಸ್. ಅವರು ಸನ್ಮಾನಿಸಿ ಹಾರೈಸಿದ್ದಾರೆ.