ಜಿಲ್ಲೆ

ದೃಷ್ಟಿದೋಷವಿರುವ ವಿದ್ಯಾರ್ಥಿಗೆ ಓಟದಲ್ಲಿ ಚಿನ್ನದ ಪದಕ

Avinash R

ಕುಂಬಳೆ: ದೃಷ್ಟಿದೋಷವಿರುವ ವಿದ್ಯಾರ್ಥಿ ರಾಜ್ಯ ಶಾಲಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಂಗಡಿಮೊಗರು ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ನಿಯಾಸ್ ಅಹಮ್ಮದ್ ಈ ಸಾಧನೆಗೈದವರು. ಕೊಚ್ಚಿಯಲ್ಲಿ ನಡೆದ ರಾಜ್ಯ ಶಾಲಾ ಕ್ರೀಡಾಕೂಟದ ಸಬ್ ಜ್ಯೂನಿಯರ್ ಹುಡುಗರ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ಈತನ ಈ ಸಾಧನೆಯಿಂದ ಕ್ರೀಡಾಕೂಟದಲ್ಲಿ ಕಾಸರಗೋಡಿಗೆ ಮೊದಲ ಚಿನ್ನ ದೊರಕಿದೆ. 100 ಮೀಟರ್ ಓಟದಲ್ಲಿ ಕೇವಲ 12.40 ಸೆಕೆಂಡುಗಳಲ್ಲಿ ನಿಯಾಸ್ ಅಹಮ್ಮದ್ ಪೂರ್ತಿಗೊಳಿಸಿದ್ದಾರೆ.

ನಿಯಾಸ್ ಅಹಮ್ಮದ್‌ಗೆ ಶೇ.50 ಶೇಕಡಾದಷ್ಟು ದೃಷ್ಟಿದೋಷ ಇದೆ. ಕನ್ನಡಕ ತೆಗೆದರೆ ಹತ್ತಿರವಿರುವ ವಸ್ತುಗಳೂ ಗೋಚರಿಸದ ಸ್ಥಿತಿ. ಹಾಗಿದ್ದರೂ ಕ್ರೀಡಾಕೂಟದಲ್ಲಿ ತಾನೊಬ್ಬ ಸಮರ್ಥ ಓಟಗಾರನೆಂದು ತೋರಿಸಿಕೊಟ್ಟಿದ್ದಾರೆ. ಅಂಗಡಿಮೊಗರು ಬಳಿಯ ಬಕ್ಕಂವಳಪ್ಪ್ ಎಂಬಲ್ಲಿನ ಅಬ್ದುಲ್ ಹಮೀದ್- ನಸೀಮ ದಂಪತಿಯ ಪುತ್ರ.